ದೇಶ

ವಲಸಿಗರ ಬದಲು ಭಾರತೀಯ ಅಲ್ಪಸಂಖ್ಯಾತರ ರಕ್ಷಣೆ ಮಾಡಿ: ಪ್ರಧಾನಿ ಮೋದಿಗೆ ಓವೈಸಿ

Manjula VN

ಹೈದರಾಬಾದ್: ಪೌರತ್ವ ಕಾಯ್ದೆ ವಿರುದ್ಧ ಕೇಂದ್ರದ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರು, ನೆರೆ ರಾಷ್ಚ್ರದ ವಲಸಿಗರ ಬದಲಾಗಿ ದೇಶದಲ್ಲಿರುವ ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಮೊದಲು ರಕ್ಷಣೆ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲಹೆ ನೀಡಿದ್ದಾರೆ. 

ಪೆದ್ದಪಲ್ಲಿಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ  ಮಾತನಾಡಿದ ಓವೈಸಿ, ಪೌರತ್ವ ತಿದ್ದುಪಡಿ ಕಾಯ್ದೆ ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನದ ಮನೋಭಾವಕ್ಕೆ ವಿರುದ್ಧವಾಗಿತ್ತು. ನಿಮಗೆ ಮತ ಹಾಕಿದವರು ಭಾರತೀಯರು, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಜನರಲ್ಲ. ಆದರೆ, ಮೋದಿ ಇಲ್ಲಿರುವ ದಲಿತರು, ಭಾರತೀಯರ ಬದಲಾಗಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ವಲಸಿಗರಿಗೆ ರಕ್ಷಣೆ  ನೀಡುತ್ತಿದ್ದಾರೆಂದು ಹೇಳಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಕೇವಲ ಮುಸ್ಲಿಮರ ವಿರುದ್ದವಷ್ಟೇ ಅಲ್ಲ ದಲಿತರ ವಿರುದ್ಧವಾಗಿಯೂ ಇದೆ. ದೇಶದಲ್ಲಿರುವ ಅಲ್ಪಸಂಖ್ಯಾತರ ವಿರುದ್ಧ ಇಲ್ಲ ಎಂದು ಹೇಳುತ್ತಾರೆ ಮೋದಿ. ಆದರೆ, ಧರ್ಮದ ಗೆರೆ ಎಳೆದು ಜನರನ್ನು ಇಬ್ಭಾಗ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ತಿಳಿಸಿದ್ದಾರೆ. 

SCROLL FOR NEXT