ದೇಶ

ಜಾರ್ಖಂಡ್: ಹಲ್ಲಿ ಬಿದ್ದ ಆಹಾರ ಸೇವಿಸಿ 40 ಯೋಧರು ಆಸ್ಪತ್ರೆಗೆ ದಾಖಲು 

Nagaraja AB

ರಾಂಚಿ: ಹಜಾರಿಬಾಗ್ ನ ಜಾರ್ಖಂಡ್ ಶಸಾಸ್ತ್ರ ಪೊಲೀಸ್  ತರಬೇತಿ ಕೇಂದ್ರದಲ್ಲಿ ವಿಷ ಮಿಶ್ರಿತ ಆಹಾರ ಸೇವಿಸಿ 40ಕ್ಕೂ ಹೆಚ್ಚು ಯೋಧರು ಆಸ್ಪತ್ರೆಗೆ ದಾಖಲಾಗಿದ್ದಾರೆ

ಗುರುವಾರ ರಾತ್ರಿ ಊಟ ಸೇವಿಸಿದ ನಂತರ ತರಬೇತಿ ಕೇಂದ್ರದಲ್ಲಿದ್ದ ಯೋಧರು ಅಸ್ವಸ್ಥಗೊಂಡಿದ್ದು, ನಂತರ ಅವರನ್ನು ಹಜಾರಿಬಾಗ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪದ್ಮಾ ತರಬೇತಿ ಕೇಂದ್ರದಲ್ಲಿ ಸುಮಾರು 1 ಸಾವಿರದ 130 ಕಾನ್ಸ್ ಟೇಬಲ್ ಗಳು ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ನಂತರ ಅವರನ್ನು ಸಹಾಯಕ ಸಬ್ ಇನ್ಸ್ ಪೆಕ್ಟರ್ ( ಎಎಸ್ ಐ) ಹುದ್ದೆಗೆ ಬಡ್ತಿ ನೀಡಲಾಗುತ್ತದೆ. 

ಗುರುವಾರ ರಾತ್ರಿ ಊಟ ಮುಗಿಸಿದ ನಂತರ ಯೋಧರಿಗೆ ಹೊಟ್ಟೆನೋವು,ವಾಂತಿ ಕಾಣಿಸಿಕೊಂಡಿದೆ. ಸ್ವಲ್ಪ ಹೊತ್ತಿನ ಬಳಿಕ ಆಹಾರ ಬೇಯಿಸುವ ಪಾತ್ರೆಯಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ  ಯೋಧರು ಅಪಾಯದಿಂದ ಪಾರಾಗಿದ್ದಾರೆ .

ಈ ಮಧ್ಯೆ ತರಬೇತಿ ಕೇಂದ್ರದಲ್ಲಿ ಯೋಧರಿಗೆ ಶುದ್ಧ ಹಾಗೂ ಸೂಕ್ತ ರೀತಿಯಲ್ಲಿ ಆಹಾರ ನೀಡುತ್ತಿಲ್ಲ ಎಂದು ಪೊಲೀಸ್ ಸಂಘ ಆರೋಪಿಸಿದೆ. 

SCROLL FOR NEXT