ದೇಶ

ಮುಖಕ್ಕೆ ಗುಂಡೇಟಿನಿಂದ ಗಾಯವಾಗಿದ್ದರೂ 7 ಕಿಮೀ ಕ್ರಮಿಸಿ ಕುಟುಂಬದ ವಿರುದ್ಧ ಎಫ್ಐಆರ್ ದಾಖಲಿಸಿದ ಮಹಿಳೆ!

Raghavendra Adiga

ಚಂಡಿಘರ್: ತಲೆಗೆ ಮೂರು ಗುಂಡುಗಳು ಹೊಕ್ಕಿದ್ದು ಮುಖಕ್ಕೆ ಸಹ ಒಂದು ಗುಂಡೇಟು ಬಿದ್ದಿದ್ದರೂ ಸಹ 42 ವರ್ಷದ ಮಹಿಳೆ ಏಳು ಕಿಲೋಮೀಟರ್ ದೂರ ಕ್ರಮಿಸಿ ತನ್ನ ಸಹೋದರ ಮತ್ತು ಸೋದರಳಿಯ ವಿರುದ್ಧ ಭೂ ಕಬಳಿಕೆ ಪ್ರಕರಣದ ದೂರು ದಾಖಲಿಸಲು ಪಂಜಾಬ್‌ನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ 

ತನ್ನ ಕಿರಿಯ ಸೋದರಳಿಯ , ಭೂ ವಿವಾದದ ಸಂಬಂಧ ಕೋಪಗೊಂಡು ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ  ಎಂದು ಮಹಿಳೆ ಆರೋಪಿಸಿದ್ದಾರೆ.

ಆಕೆಯ ವೃದ್ದ ತಾಯಿಗೆ ಸಹ ಗುಂಡು ತಗುಲಿ ಗಾಯಗಳಾಗಿದ್ದವು. ಆದರೆ ಇಬ್ಬರೂ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಇನ್ನು ಆರೋಪಿ 10 ನೇ ತರಗತಿ ವಿದ್ಯಾರ್ಥಿಯಾಗಿದ್ದು, ತನ್ನ ಚಿಕ್ಕಮ್ಮ ಸುಮೀತ್ ಕೌರ್ ಮತ್ತು ತಾಯಿ ಸುಖಬಿಂದರ್ ಕೌರ್ ಅವರ ಮೇಲೆ ಪಂಜಾಬಿನ ಮುಕ್ತಸರ್ ಜಿಲ್ಲೆಯ ಹಳ್ಳಿಯೊಂದರ ನಿವಾಸದಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ.ಘಟನೆ ಬಳಿಕ ಪೋಲೀಸ್  ಠಾಣೆ ತಲುಪಿದ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಂಆಡಲಾಗಿದೆ. ವೈದ್ಯರುಗುಂಡುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೋಲೀಸರು ಮಾಹಿತಿ ಒದಗಿಸಿದ್ದಾರೆ.

ತನ್ನ ಸಹೋದರ ಹರಿಂದರ್ ಸಿಂಗ್ ತನಗೆ ಮತ್ತು ತನ್ನತಾಯಿಗೆ ಸೇರಿದ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದು ಸುಮೀತ್ ಕೌರ್ ಪೊಲೀಸರಿಗೆ ತಿಳಿಸಿದ್ದಾರೆ"ನನ್ನ ತಂದೆಯ ಮರಣದ ನಂತರ, ನನ್ನ ತಾಯಿ ಮತ್ತು ನನಗೆ 16 ಎಕರೆಭೂಮಿ ದೊರಕಿದೆ.ಆದರೆ ನನ್ನ ಅಣ್ಣನು ಆ ಭೂಮಿಯನ್ನು ಕಬಳಿಸಲು ಪ್ರಯತ್ನಿಸಿದ್ದಾನೆ" ಎಂದು ಅವರು ಹೇಳಿದರು.

ತನ್ನ ಸಹೋದರ ಮತ್ತು ಅವನ ಮಗ ಕೂಡ ಆಕೆಯನ್ನು ಕೊಲ್ಲಲು  ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದರು. ಅಪ್ರಾಪ್ತ ಬಾಲಕ ಮತ್ತು ಆತನ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

SCROLL FOR NEXT