ದೇಶ

ಜಯದೇವ ಮೇಲ್ಸೇತುವೆ ನೆಲಸಮಕ್ಕೆ ಸಿದ್ಧತೆ 

Srinivas Rao BV

ಬಿಎಂಆರ್ ಸಿಎಲ್ ಮೆಟ್ರೋ ಕಾಮಗಾರಿಗಾಗಿ ಜಯದೇವ ಆಸ್ಪತ್ರೆ ಬಳಿ ಇರುವ ಮೇಲ್ಸೇತುವೆಯನ್ನು ನೆಲಸಮ ಮಾಡುವುದಕ್ಕೆ ಸಿದ್ಧತೆ ನಡೆಸಿದೆ. 

ಜ.20 ರಂದು ಮೇಲ್ಸೇತುವೆ ನೆಲಸಮ ಕಾಮಗಾರಿ ಪ್ರಾರಂಭವಾಗಲಿದೆ. ಈ ಮೇಲ್ಸೇತುವೆ ಇರುವ ಭಾಗದಲ್ಲಿ ಎಲಿವೇಟೆಡ್ ರಸ್ತೆ ಹಾಗೂ ಜಯದೇವ ಜಂಕ್ಷನ್ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣವೂ ಬರಲಿದೆ. ಎಲೆಕ್ಟ್ರಾನಿಕ್ ಸಿಟಿ ಕಾರಿಡಾರ್ ಮೆಟ್ರೋ ಎರಡನೇ ಹಂತದ ರೀಚ್-5 ಲೈನ್ (ಆರ್ ವಿ ರಸ್ತೆಯಿಂದ ಬೊಮ್ಮ ಸಂದ್ರಕ್ಕೆ ಸಂಪರ್ಕ) ನ ಭಾಗವಾಗಿದೆ. 

ಮೇಲ್ಸೆತುವೆ ನೆಲಸಮದ ಹಿನ್ನೆಲೆಯಲ್ಲಿ ಬಿಎಂಆರ್ ಸಿಎಲ್ ಸಂಚಾರ ನಿಯಮಗಳನ್ನು ಬದಲಾವಣೆ ಮಾಡಿದೆ. ಜಯದೇವ ಮೇಲ್ಸೇತುವೆಯಲ್ಲಿ ಎಲ್ಲಾ ರೀತಿಯ ಟ್ರಾಫಿಕ್ ಗಳಿಗೂ  ನಿರ್ಬಂಧ ವಿಧಿಸಲಾಗಿದೆ. ಮಾರೇನ ಹಳ್ಳಿಯ 18 ನೇ ಮುಖ್ಯರಸ್ತೆಯಿಂದ ಬಿಟಿಎಂ 2 ನೇ ಹಂತದ 29 ನೇ ಮುಖ್ಯರಸ್ತೆ ವರೆಗೂ ಸಹ ಹೊರವರ್ತುಲ ರಸ್ತೆಯಲ್ಲಿ ರಾತ್ರಿ 10:30 ರಿಂದ ಬೆಳಿಗ್ಗೆ 5:30 ವರೆಗೆ ಎರಡೂ ದಿಕ್ಕುಗಳಲ್ಲಿ ಸಂಚಾರ ನಿರ್ಬಂಧ ಇರಲಿದೆ. ಇದೇ ಮಾರ್ಗದಲ್ಲಿ ಬೆಳಿಗ್ಗೆ 6 ರಿಂದ ರಾತ್ರಿ 10 ವರೆಗೆ ಬಿಎಂಟಿಸಿ ಬಸ್ ಗಳ ಸಂಚಾರ, ಆಂಬುಲೆನ್ಸ್, ದ್ವಿಚಕ್ರ ವಾಹನಗಳಿಗೆ ಮಾತ್ರ ಅವಕಾಶ ಇರಲಿದೆ. ಉಳಿದ ವಾಹನಗಳಿಗೆ ಈ ವೇಳೆಯಲ್ಲೂ ನಿರ್ಬಂಧ ಅನ್ವಯವಾಗಲಿದೆ. 

SCROLL FOR NEXT