ದೇಶ

ಸಿಎಎ ಜಾರಿ ಅಗತ್ಯವಿರಲಿಲ್ಲ: ಶೇಖ್ ಹಸೀನಾ 

Srinivas Rao BV

ದುಬೈ: ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯವಿರಲಿಲ್ಲ, ಮೇಲಾಗಿ ಇದರ ಉದ್ದೇಶವೂ ಅರ್ಥವಾಗುತ್ತಿಲ್ಲ ಎಂದು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಪ್ರತಿಕ್ರಿಯೆ ನೀಡಿದ್ದಾರೆ. 

ಬಾಂಗ್ಲಾದೇಶ ಮತ್ತು ಇತರ ನೆರೆಯ ದೇಶಗಳಲ್ಲಿ ಕಿರುಕುಳ ಅನುಭವಿಸುತ್ತಿರುವ ಹಿಂದೂಗಳಿಗಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರ ಯಾವ ಅರ್ಥದಲ್ಲಿ ಹೇಳುತ್ತಿದೆಯೋ ತಮಗೆ ಗೊತ್ತಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಸರ್ಕಾರಕ್ಕೆ ಈ ಕಾಯ್ದೆ ಅನಿವಾರ್ಯವಾಗಿರಲಿಲ್ಲ ಅವರು ಅಬುದಾಭಿಯಲ್ಲಿ ಗಲ್ಫ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ. ಆದರೂ ಇದು ಭಾರತದ ಆಂತರಿಕ ವಿಚಾರ ಎಂದರು. 

ಸಿಎಎ ಮತ್ತು ಎನ್ಆರ್ ಸಿ ಭಾರತದ ಆಂತರಿಕ ವಿಷಯಗಳು ಎಂದು ಬಾಂಗ್ಲಾದೇಶ ಯಾವಾಗಲೂ ಹೇಳುತ್ತಾ ಬಂದಿದೆ. 

161 ಮಿಲಿಯನ್ ಜನಸಂಖ್ಯೆಯ ಶೇಕಡಾ 10.7 ರಷ್ಟು ಹಿಂದೂ ಮತ್ತು 0.6 ಶೇಕಡಾ ಬೌದ್ಧರು ಇರುವ ಬಾಂಗ್ಲಾದೇಶದಲ್ಲಿ , ಹಿಂದೂಗಳು ಕೇವಲ ಧಾರ್ಮಿಕ ಕಿರುಕುಳದ ಕಾರಣಕ್ಕಾಗಿ ಭಾರತಕ್ಕೆ ಯಾವುದೇ ವಲಸೆ ಹೋಗುತ್ತಾರೆ ಎಂಬ ವಿಚಾರವನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಹಸೀನಾ  ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧ ಅತ್ಯುತ್ತಮವಾಗಿದೆ ಎಂದೂ  ಶೇಖ್ ಹಸೀನಾ ಸ್ಪಷ್ಟಪಡಿಸಿದರು. 

SCROLL FOR NEXT