ದೇಶ

ಉತ್ತರ ಪ್ರದೇಶ: ಸಿಎಎ ವಿರೋಧಿಸಿ ಪ್ರತಿಭಟನೆ, 60 ಮಹಿಳೆಯರ ವಿರುದ್ಧ ಎಫ್ ಐಆರ್ ದಾಖಲು

Nagaraja AB

ಅಲಿಘಡ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಪಿಆರ್ ವಿರೋಧಿಸಿ ಉತ್ತರ ಪ್ರದೇಶದ ಆಲಿಘಡದಲ್ಲಿ ಪ್ರತಿಭಟನೆ ನಡೆಸಿದ 60-70 ಮಹಿಳೆಯರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.  ಸೆಕ್ಷನ್ 144 ನ್ನು ಉಲ್ಲಂಘಿಸಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಕೆಲ ಮಹಿಳೆಯರು ಸೆಕ್ಷನ್ 144 ಉಲ್ಲಂಘಿಸಿ, ಸಿಎಎ ಹಾಗೂ ಎನ್ ಪಿಆರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆದ್ದರಿಂದ ಸುಮಾರು ಆರವತ್ತರಿಂದ 70 ಮಂದಿ ಅಪರಿಚಿತ ಮಹಿಳೆಯರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಆಲಿಘಡ ಸಿವಿಲ್ ಲೈನ್ಸ್ ಸರ್ಕಲ್ ಆಫೀಸರ್ ಅನಿಲ್ ಸಾಮಾನಿಯಾ ತಿಳಿಸಿದ್ದಾರೆ.

2014 ಡಿಸೆಂಬರ್ 31ಕ್ಕೂ ಮುಂಚಿತವಾಗಿ ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂಗಳು, ಸಿಖ್ಖರು, ಜೈನರು, ಪಾರ್ಸಿ , ಬೌದ್ದರು ಹಾಗೂ ಕ್ರಿಶ್ಚಿಯನ್ನರಿಗೆ  ಪೌರತ್ವ ಒದಗಿಸುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಸ್ಸಾಂ ಸೇರಿದಂತೆ ರಾಷ್ಟ್ರದ ವಿವಿಧೆಡೆ ಪ್ರತಿಭಟನೆ ನಡೆದಿತ್ತು. 

SCROLL FOR NEXT