ದೇಶ

ಉದ್ಯೋಗವಿಲ್ಲ, ಆರ್ಥಿಕ ಬೆಳವಣಿಗೆ ದರ ಕುಸಿತವಾಗಿದೆ ಆದರೆ, ಮೋದಿಗೆ ಪಾಕಿಸ್ತಾನದ್ದೆ ಚಿಂತೆ- ಕಪಿಲ್ ಸಿಬಲ್ 

Nagaraja AB

ಕೊಝಿಕೊಡ್:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಿರಂತವಾಗಿ ಸುಳ್ಳನ್ನು ಹೇಳಲಾಗುತ್ತಿದೆ. ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಬದಲು ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನದ್ದೆ ಚಿಂತೆಯಾಗಿದೆ ಎಂದು ಅವರು ಟೀಕಿಸಿದ್ದಾರೆ. 

ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಪ್ರಧಾನಿ ಪಾಕಿಸ್ತಾನದ ಬಗ್ಗೆ ಕನಸು ಕಾಣುತ್ತಿದ್ದಾರೆ. ಅವರು ಏದ್ದಾಗಲೆಲ್ಲಾ ಪಾಕಿಸ್ತಾನ ಬಗ್ಗೆ ಮಾತನಾಡುತ್ತಾರೆ. ಸಂಸತ್ತಿನಲ್ಲಿದ್ದಾಗ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಅವರು ಸಂಪೂರ್ಣವಾಗಿ ಭಾರತವನ್ನು ಮರೆತಿದ್ದಾರೆ. ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಉದ್ಯೋಗವಿಲ್ಲ, ಆರ್ಥಿಕ ಬೆಳವಣಿಗೆ ದರ ಕುಂಠಿತವಾಗಿದೆ. ಕೃಷಿ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಆದರೆ, ಈಗಲೂ ಪ್ರಧಾನಿ ಮೋದಿ ಪಾಕಿಸ್ತಾನದ ಬಗ್ಗೆ ಆತಂಕಗೊಂಡಿದ್ದಾರೆ ಎಂದರು.

ಸಂವಿಧಾನದ ಕಲಂ 370ನೇ ವಿಧಿ ರದ್ಧತಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಪಿಲ್ ಸಿಬಲ್,  ಗೃಹ ಸಚಿವರು ಸಂಸತ್ತಿಲ್ಲಿ ಹೇಳಿದ್ದಂತೆ ಜಮ್ಮು- ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜವಾಗಿಲ್ಲ , ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಸುಳ್ಳು ಹೇಳಲಾಗುತ್ತಿದೆ. ಎನ್ ಆರ್ ಸಿ ಮುಸ್ಲಿಂರ ವಿರುದ್ಧ ಮಾತ್ರವಲ್ಲ, ದೇಶದ ಜನರ ವಿರೋಧಿಯಾಗಿದೆ. ಈ ಕಾಯ್ದೆಗಳ ವಿರುದ್ಧವಾಗಿ ನಿರಂತವಾಗಿ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು. 

SCROLL FOR NEXT