ಯುದ್ಧ ವಿಮಾನ 
ದೇಶ

ದಕ್ಷಿಣ ಭಾರತಕ್ಕೆ ಮೊದಲು: ತಂಜಾವೂರು ವಾಯುಪಡೆ ಕೇಂದ್ರಕ್ಕೆ ಸುಖೋಯ್-30 ಎಂಕೆಐ ಸೇರ್ಪಡೆ

ಭಾರತೀಯ ರಕ್ಷಣಾ ಸನ್ನದ್ಧತೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಕಾರ್ಯಾಚರಣೆ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸುಖೋಯ್ -30 ಯುದ್ಧ ವಿಮಾನವನ್ನು ಇಲ್ಲಿನ ವಾಯುಪಡೆ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದೆ.

ತಂಜಾವೂರು: ಭಾರತೀಯ ರಕ್ಷಣಾ ಸನ್ನದ್ಧತೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮತ್ತು ಕಾರ್ಯಾಚರಣೆ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸುಖೋಯ್ -30 ಯುದ್ಧ ವಿಮಾನವನ್ನು ಇಲ್ಲಿನ ವಾಯುಪಡೆ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದೆ.

ಬ್ರಹ್ಮೋಸ್ ಕ್ಷಿಪಣಿ ಒಳಗೊಂಡ ಸುಖೋಯ್-30 ಎಂಕೆಐ ಯುದ್ಧವಿಮಾನವನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಸಮ್ಮುಖದಲ್ಲಿ ಸೇರ್ಪಡೆಗೊಳಿಸಲಾಯಿತು. ಕೊಯಮತ್ತೂರಿನ ಸೂಲೂರ್ ವಾಯುಪಡೆ ನೆಲೆಗೆ ಮುನ್ನೆಲೆಯ ಯುದ್ಧವಿಮಾನ ಈಗಾಗಲೇ ಸೇರ್ಪಡೆಗೊಂಡಿದ್ದು, ಇಂದು ಸೇರ್ಪಡೆಯಾದ ಯುದ್ಧವಿಮಾನ ದಕ್ಷಿಣ ಭಾರತದ ಮುನ್ನೆಲೆಯ ಎರಡನೇ ಯುದ್ಧವಿಮಾನವಾಗಿದೆ.

ತಂಜಾವೂರು, ದಕ್ಷಿಣ ವಾಯು ಕಮಾಂಡ್ ನ ಸುಖೋಯ್-30 ಯುದ್ಧವಿಮಾನವನ್ನು ಪಡೆದ ಮೊದಲ ಕೇಂದ್ರವೆನಿಸಿದೆ. 2013ರ ಮೇ 27ರಂದು ತಂಜಾವೂರು ವಾಯು ಪಡೆ ಕೇಂದ್ರವನ್ನು ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿ ರಾಷ್ಟ್ರಕ್ಕೆ ಸಮರ್ಪಿಸಿದ್ದರು. 

ಹಿಂದೂ ಮಹಾಸಾಗರ ಪ್ರದೇಶದ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಆರ್ಥಿಕ ಹಿತಾಸಕ್ತಿ ಮತ್ತು ಆಸ್ತಿಗಳನ್ನು ರಕ್ಷಿಸುವುದಕ್ಕಾಗಿ ಈ ಕೇಂದ್ರ ಸ್ಥಾಪಿಸಲಾಗಿದೆ. ತಂಜಾವೂರು ಮತ್ತು ಕೊಯಮತ್ತೂರು ಕೇಂದ್ರಗಳ ಸ್ಥಾಪನೆಗಳಿಂದ ದಕ್ಷಿಣ ಭಾಗದಲ್ಲಿ ಭಾರತೀಯ ವಾಯುಪಡೆಯ ಕಾರ್ಯಾಚರಣೆ ಸಾಮಥ್ರ್ಯ ಗಣನೀಯವಾಗಿ ವೃದ್ಧಿಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!