ದೇಶ

ಮಾ.25 ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪ್ರಾರಂಭ: ವಿನ್ಯಾಸ ಅಂತಿಮಗೊಳಿಸಲಿದ್ದಾರೆ ಪ್ರಧಾನಿ ಮೋದಿ! 

Srinivas Rao BV

ಲಖನೌ: ಮಕರ ಸಂಕ್ರಾಂತಿ ಮುಕ್ತಾಯಗೊಂಡು ಹಿಂದೂಗಳಿಗೆ ಶುಭ ಮುಹೂರ್ತಗಳನ್ನಿಡುವ ದಿನಗಳು ಪ್ರಾರಂಭವಾಗಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಗಾಗಿ ಅಧಿಸೂಚನೆ ಯಾವುದೇ ಕ್ಷಣದಲ್ಲಿಯೂ ಬರಬಹುದಾಗಿದೆ. 

ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ ಫೆಬ್ರವರಿ 9 ರ ಒಳಗಾಗಿ ರಾಮಮಂದಿರಕ್ಕೆ ಟ್ರಸ್ಟ್ ರಚನೆಯಾಗಬೇಕಿದೆ. ಟ್ರಸ್ಟ್ ರಚನೆಯಾಗಿ ರಾಮ ನವಮಿ ವೇಳೆಗೆ ರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ವಿನ್ಯಾಸವನ್ನು ಅಂತಿಮಗೊಳಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಮಾ.25 ರಿಂದ ಏ.2 ಒಳಗಾಗಿ (ಚೈತ್ರ ನವರಾತ್ರಿ)ವೇಳೆಗೆ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆಯೇ ಸ್ಥಾಪಿತವಾಗಲಿರುವ ಟ್ರಸ್ಟ್ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಂದಿರ ನಿರ್ಮಾಣ ಕಾರ್ಯವನ್ನು ಸಂಪೂರ್ಣ ಮಾಡಲಾಗುತ್ತದೆ.

SCROLL FOR NEXT