ದೆಹಲಿ ವಿಧಾನಸಭೆ ಚುನಾವಣೆ: ಬಿಜೆಪಿಯಿಂದ 10 ಅಭ್ಯರ್ಥಿಗಳ ಅಂತಿಮ ಪಟ್ಟಿ 
ದೇಶ

ದೆಹಲಿ ವಿಧಾನಸಭೆ ಚುನಾವಣೆ: ಬಿಜೆಪಿಯಿಂದ 10 ಅಭ್ಯರ್ಥಿಗಳ ಅಂತಿಮ ಪಟ್ಟಿ 

ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ 10 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಜ.20 ರಂದು ಮಧ್ಯರಾತ್ರಿ ಬಿಡುಗಡೆ ಮಾಡಿದೆ. 

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ 10 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಜ.20 ರಂದು ಮಧ್ಯರಾತ್ರಿ ಬಿಡುಗಡೆ ಮಾಡಿದೆ. 

ಸಿಎಂ ಕೇಜ್ರಿವಾಲ್ ಪ್ರತಿನಿಧಿಸುವ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸುನಿಲ್ ಯಾದವ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅಡ್ವೊಕೇಟ್ ಆಗಿರುವ ಸುನಿಲ್ ಯಾದವ್ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
 
ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಕೇಜ್ರಿವಾಲ್ ನ್ನು ಮಣಿಸುವುದು ಸುಲಭ ಸಾಧ್ಯ ಎಂಬುದು ಬಿಜೆಪಿಯ ಲೆಕ್ಕಾಚಾರ. ಮೊದಲ ಪಟ್ಟಿಯಲ್ಲೇ ಟಿಕೆಟ್ ಪಡೆದಿದ್ದ ತಾಜಿಂದರ್‌ ಸಿಂಗ್‌ ಬಗ್ಗ ಅವರನ್ನು ಅಂತಿಮ ಪಟ್ಟಿಯಲ್ಲಿ ಹರಿನಗರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಬಿಜೆಪಿ ಮೂಲಗಳ ಪ್ರಕಾರ ಬಗ್ಗ ತಿಲಕ್ ನಗರದಿಂದ ಸ್ಪರ್ಧಿಸುವ ಇಚ್ಛೆ ಹೊಂದಿದ್ದರು ಆದರೆ ಈ ಕ್ಷೇತ್ರದಿಂದ ಬೇರೊಬ್ಬರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿತು. 

ಫೆ.8 ಕ್ಕೆ ದೆಹಲಿಯಲ್ಲಿ ಮತದಾನ ನಡೆಯಲಿದ್ದು ಫೆ.11 ಕ್ಕೆ ಮತ ಎಣಿಕೆ ನಡೆಯಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು, ಅಧಿಕೃತ ಆದೇಶ!

ಅನ್‌ಫಾಲೋ ಪ್ರಹಸನ ಬೆನ್ನಲ್ಲೇ ದಿಢೀರ್ ಅಂತ ಅಮಿತ್ ಶಾರನ್ನು ಭೇಟಿಯಾದ ರಿಷಭ್ ಶೆಟ್ಟಿ!

ಛತ್ತೀಸಗಢ: IED ಸ್ಫೋಟದಲ್ಲಿ ನಾಲ್ವರು ಯೋಧರು ಹುತಾತ್ಮ; ನಕ್ಸಲರಿಟ್ಟಿದ್ದ ನೆಲಬಾಂಬ್ ನಿಷ್ಕ್ರಿಯಗೊಳಿಸುವಾಗ ದುರ್ಘಟನೆ!

ಟಿಎಂಸಿ ಕಾರ್ಯಕರ್ತರಿಂದ ನಮಗೆ ಜೀವ ಬೆದರಿಕೆ ಇದೆ; ಮತ ಎಣಿಕೆ ವೇಳೆ ನಮಗೆ ಭದ್ರತೆ ಕೊಡಿ; ಬಂಗಾಳದಲ್ಲಿ ನೂರಾರು ಗ್ರಾಮಸ್ಥರಿಂದ ಪ್ರತಿಭಟನೆ

ಜೂನ್ 12 ರಿಂದ ಇಂಗ್ಲೆಂಡ್ ನಲ್ಲಿ ಮಹಿಳಾ T20 ವಿಶ್ವಕಪ್ ಆರಂಭ: ಭಾರತ ತಂಡ ಪ್ರಕಟ!

SCROLL FOR NEXT