ದೇಶ

ಕೇರಳ ಸರ್ಕಾರಕ್ಕೆ ಭಾರಿ ಮುಖಭಂಗ: ಸಿಎಎ ವಿರೋಧಿ ಕೇಸ್ ಗೆ ನೀಡಿದ್ದ ವಿವರಣೆ ತಿರಸ್ಕರಿಸಿದ ರಾಜ್ಯಪಾಲ

Srinivas Rao BV

ತಿರುವನಂತಪುರಂ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕೇರಳ ಸರ್ಕಾರಕ್ಕೆ ಪ್ರಾರಂಭದಲ್ಲೇ ಮುಖಭಂಗ ಎದುರಾಗಿದೆ. 

ತಮ್ಮ ಗಮನಕ್ಕೆ ತರದೇ ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಿದ್ದನ್ನು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಕೇರಳ ಸರ್ಕಾರ ಉತ್ತರವನ್ನೂ ನೀಡಿತ್ತು. ಆದರೆ ರಾಜ್ಯಪಾಲರು ಕೇರಳ ಸರ್ಕಾರದ ವಿವರಣೆಯನ್ನು ತಿರಸ್ಕರಿಸಿದ್ದಾರೆ. 

ಯಾವುದೇ ವಿವರಣೆಯೂ ನನಗೆ ಸಮಾಧಾನ ಉಂಟುಮಾಡುವುದಿಲ್ಲ ಎಂದು ಆರೀಫ್ ಮೊಹಮ್ಮದ್ ಹೇಳಿದ್ದಾರೆ. ಸಿಎಎ ಕಾಯ್ದೆ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸರ್ಕಾರದ ನಡೆಯನ್ನು ವಿವರಿಸುವುದಕ್ಕಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಟಾಮ್ ಜೋಸ್ ಆರೀಫ್ ಮೊಹಮ್ಮದ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ, ಸರ್ಕಾರ ಯಾವ ಆಧಾರದಲ್ಲಿ ಕೋರ್ಟ್ ಮೆಟ್ಟಿಲೆರಿದೆ, ಉದ್ದೇಶ ಪೂರ್ವಕವಾಗಿ ಯಾವುದೇ ನಿಯಮಗಳನ್ನೂ ಉಲ್ಲಂಘಿಸಿಲ್ಲ ಎಂಬುದನ್ನು ವಿವರಿಸಿದ್ದರು. ಆದರೆ ಸರ್ಕಾರದ ವಿವರಣೆಯನ್ನು ತಿರಸ್ಕರಿಸಿರುವ ರಾಜ್ಯಪಾಲರು ಕೇರಳ ಸರ್ಕಾರದ ನಡೆಯನ್ನು ಅಕ್ರಮ ಹಾಗೂ ಕಾನೂನಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.

SCROLL FOR NEXT