ದೇಶ

ದೆಹಲಿ ಚುನಾವಣೆ: ಐದು ವರ್ಷದಲ್ಲಿ ಕೇಜ್ರಿವಾಲ್ ಆಸ್ಥಿಯಲ್ಲಿ 1.3 ಕೋಟಿ ರೂ ಏರಿಕೆ

Srinivasamurthy VN

ನವದಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಆಸ್ತಿ ಮೌಲ್ಯ ಐದು ವರ್ಷದಲ್ಲಿ 1.3 ಕೋಟಿ ರೂಗಳಷ್ಟು ಹೆಚ್ಚಳವಾಗಿದೆ.

ದೆಹಲಿ ವಿಧಾನಸಭೆ ಚುನಾವಣೆ ನಿಮಿತ್ತ ನಿನ್ನೆ ತಮ್ಮ ನಾಮಪತ್ರ ಸಲ್ಲಿಸಿದ ಅರವಿಂದ್ ಕೇಜ್ರಿವಾಲ್ ಅವರು, ಇದೇ ವೇಳೆ ತಮ್ಮ ಆಸ್ತಿ ಘೋಷಣೆ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸಿದ ಕೇಜ್ರಿವಾಲ್ ಅವರು ತಮ್ಮ ಸಂಪೂರ್ಣ ಘೋಷಣೆ ಮಾಡಿದ್ದಾರೆ. ಕೇಜ್ರಿವಾಲ್ ತಮ್ಮ ಒಟ್ಟು ಆಸ್ತಿ ಮೌಲ್ಯ 3.4 ಕೋಟಿ ರೂ ಎಂದು ಹೇಳಿದ್ದಾರೆ. 2015ರ ಚುನಾವಣೆ ವೇಳೆ ಕೇಜ್ರಿವಾಲ್ ಅವರ ಆಸ್ತಿ 2.1 ಕೋಟಿ ರೂ ಇತ್ತು. ಕೇಜ್ರಿವಾಲ್‌ ಅವರ ಹಣ ಮತ್ತು ಸ್ಥಿರ ಠೇವಣಿ 2015ರಲ್ಲಿ 2.26 ಲಕ್ಷ ರೂಗಳಷ್ಟಿತ್ತು.  ಈಗ  9.65 ಲಕ್ಷ ರೂಗೆ ಏರಿಕೆಯಾಗಿದೆ. ಸ್ಥಿರ ಆಸ್ತಿ  92 ಲಕ್ಷ ರೂದಿಂದ 1.77 ಕೋಟಿ ರೂಗೆ ಹೆಚ್ಚಾಗಿದೆ. 

ಕೇಜ್ರಿವಾಲ್ ಚರಾಸ್ತಿ ಮೌಲ್ಯವು ಮಾರುಕಟ್ಟೆಯಲ್ಲಿ ಏರಿಕೆಯಾಗಿರುವುದರಿಂದ ಆಸ್ತಿ ಏರಿಕೆಯಾಗಿದೆ ಎಂದು ಪಕ್ಷ ತಿಳಿಸಿದೆ. ಇನ್ನು ಪತ್ನಿ ಸುನೀತಾ ಅವರ ಸ್ಥಿರ ಆಸ್ತಿ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅವರ ಹಣ ಹಾಗೂ ಸ್ಥಿರ ಠೇವಣಿ ಐದು ವರ್ಷಗಳಲ್ಲಿ 15 ಲಕ್ಷ ದಿಂದ 57 ಲಕ್ಷ ರೂಗೆ ಏರಿಕೆಯಾಗಿದೆ. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುನೀತಾ ಅವರು 2016ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಆಗ 32 ಲಕ್ಷ ರೂ ಮೌಲ್ಯದಷ್ಟು ಪಿಂಚಣಿ ಹಣ ದೊರೆತಿತ್ತು. ಬಾಕಿಯ ಹಣ ಉಳಿತಾಯದ್ದಾಗಿದೆ ಎಂದು ಆಪ್ ಪಕ್ಷ ಹೇಳಿದೆ.

SCROLL FOR NEXT