ದೇಶ

ಗೃಹ ಸಚಿವ ಶಾ, ಸೋನಿಯಾ, ರಾಹುಲ್ ಸೇರಿ 503 ಸಂಸದರು ಆಸ್ತಿ ವಿವರ ನೀಡಿಲ್ಲ! ಆರ್‌ಟಿಐನಿಂದ ಬಯಲಾಯ್ತು ಮಹತ್ವದ ಸತ್ಯ

Raghavendra Adiga

543ರಲ್ಲಿ 503 ಮಂದಿ ವಿವರ ನೀಡಲು ವಿಫಲ

ಡೆಹರಾಡೂನ್: 2019 ರ ಮೇನಲ್ಲಿ ಸಂಸದೀಯ ಚುನಾವಣೆ ನಡೆದು ಚುನಾಯಿತರಾಗಿರುವ ಲೋಕಸಭೆಯ 543 ಸಂಸದರ ಪೈಕಿ 503 ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ನೀಡಲು ವಿಫಲರಾಗಿದ್ದಾರೆ ಎಂದು ಆರ್‌ಟಿಐ ಮಾಹಿತಿಯೊಂದು ಬಹಿರಂಗಪಡಿಸಿದೆ.

ಲೋಕಸಭೆ ಆಸ್ತಿ ಘೋಷಣೆ ನಿಯಮ 2004ರ ಅನ್ವಯ  ಪ್ರತಿಯೊಬ್ಬ ಸದಸ್ಯರು ಚುನಾಯಿತರಾದ 90 ದಿನಗಳಲ್ಲಿ ತಮ್ಮ ಆಸ್ತಿ ವಿವರಗಳನ್ನು ಘೋಷಿಸಬೇಕು.

'ಹೌಸ್ ಆಫ್ ದಿ ಪೀಪಲ್' (ಲೋಕಸಭೆ) ಗಾಗಿ ಚುನಾಯಿತರಾದ ಪ್ರತಿಯೊಬ್ಬ ಅಭ್ಯರ್ಥಿಯು ಸಂಸತ್ ಸದಸ್ಯರಾಗಿ ಚುನಾಯಿತನಾಗಿ ಪ್ರಮಾಣವಚನ ತೆಗೆದುಕೊಂಡ  ದಿನಾಂಕದಿಂದ 90 ದಿನಗಳಲ್ಲಿ, ಆಸ್ತಿಯ ಬಗೆಗೆ ಮಾಹಿತಿಯನ್ನು ಒದಗಿಸಬೇಕು ಎಂದು ಕಾಯಿದೆಯ ನಿಯಮ 3 ಹೇಳುತ್ತದೆ ಮತ್ತು ಅವರು.ಅವರ ಸಂಗಾತಿ ಮತ್ತು ಅವನ ಅವಲಂಬಿತ ಮಕ್ಕಳು ಜಂಟಿಯಾಗಿ ಅಥವಾ  ಬೇರೆ ಬೇರೆಯಾಗಿ ಆಸ್ತಿ ಹೊಂದಿದ್ದರೆ ಅದರ ಮಾಹಿತಿಯನ್ನು ನೀಡಬೇಕು

ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರ ಮೂಲದ ಸಾಮಾಜಿಕ ಕಾರ್ಯಕರ್ತ ನಾದಿಮ್ ಉದ್ದೀನ್ ಈ ಸಂಬಂಧ ಆರ್‌ಟಿಐ ಅರ್ಜಿ ಸಲ್ಲಿಸಿ ವಿವರ ಕೇಳಿದ್ದರು.

"ನಮ್ಮ ಸಂಸದರ ಪ್ರತಿಯೊಂದು ನಡವಳಿಕೆಯೂ ಪ್ರಮುಖವಾಗಿರುತ್ತದೆ.ಪಾರದರ್ಶಕತೆ ಮಾತಿನಲ್ಲಿ ಂಆತ್ರವೇ ಇರುವುದಲ್ಲ ಅವರು ಮಾತಿನಂತೆ ನಡೆದುಕೊಳ್ಳಬೇಕು ಆಗಷ್ಟೇ ಜನರು ವರ ಮೇಲೆ ನಂಬಿಕೆ ಇಡಲು ಸಾಧ್ಯವಾಗುತ್ತದೆ" ಎಂದು ನಾದಿಮ್ ಉದ್ದೀನ್ ಹೇಳಿದ್ದಾರೆ. ಒಟ್ಟು 543 ಜನರಲ್ಲಿ 4 ಸಂಸದರಿಗೆ  ವಿವರಗಳನ್ನು ಸಲ್ಲಿಸಲು ಇನ್ನೂ ಸಮಯವಿದೆ. "ಉಪಚುನಾವಣೆಯಲ್ಲಿ ನಾಲ್ಕು ಸಂಸದರು ಆಯ್ಕೆಯಾದರು, ಆದ್ದರಿಂದ ತಾಂತ್ರಿಕವಾಗಿ ಅವರಿಗೆ ವಿವರಗಳನ್ನು ನೀಡಲು ಇನ್ನೂ ಸಮಯವಿದೆ"

ಲೋಕಸಭಾ ಸಚಿವಾಲಯದ ಉತ್ತರವು ಡಿಸೆಂಬರ್ 10, 2019 ರವರೆಗಿನ ದತ್ತಾಂಶವನ್ನು ಹೊಂದಿದೆ.543 ಸದಸ್ಯರಲ್ಲಿ ಕೇವಲ 36 ಸಂಸದರು ಮಾತ್ರ ತಮ್ಮ ವಿವರಗಳನ್ನು ನಿಗದಿತ ಸಮಯದ ಮಿತಿಯಲ್ಲಿ ಸಲ್ಲಿಸಿದ್ದಾರೆ ಎಂದು ಅದು ಬಹಿರಂಗಪಡಿಸಿದೆ. 36 ಮಂದಿ ಸಂಸದರ ಪೈಕಿ  25 ಮಂದಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದವರು, 8 ಮಂದಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಗೆ ಸೇರಿದವರಾಗಿದ್ದಾರೆ.ಬಿಜು ಜಂತಾದಳ, ಎಐಡಿಎಂಕೆ ಮತ್ತು ಶಿವಸೇನೆಯ ತಲಾ ಒಬ್ಬರು ಆಸ್ತಿ ವಿವರ ಘೋಷಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ, ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಜವಳಿ ಸಚಿವೆ ಸ್ಮೃತಿ ಇರಾನಿ ಮತ್ತು ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್.ತಮ್ಮ ಆಸ್ತಿ ವಿವರವನ್ನು ನಿಯಮದಂತೆ ಘೋಷಣೆ ಮಾಡಿಕೊಂಡಿದ್ದಾರೆ.

ವಿಶೇಷವೆಂದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಒಬ್ಬ ಸಂಸದರೂ ಸಹ ಅಗತ್ಯ ವಿವರಗಳನ್ನು ಸಲ್ಲಿಸಿಲ್ಲ.

ವಿವರಗಳನ್ನು ಸಲ್ಲಿಸುವಲ್ಲಿ ವಿಫಲರಾದ ಉನ್ನತ ನಾಯಕರ ಪೈಕಿ  ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಮತ್ತಿತರರು ಸೇರಿದ್ದಾರೆ.

SCROLL FOR NEXT