ದೇಶ

ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲು ಸುಬ್ರಹ್ಮಣ್ಯ ಸ್ವಾಮಿ ಅರ್ಜಿ: 3 ತಿಂಗಳ ನಂತರ 'ಸುಪ್ರೀಂ' ಪರಿಶೀಲನೆ

Sumana Upadhyaya

ನವದೆಹಲಿ: ಭಾರತೀಯ ಜನತಾ ಪಕ್ಷದ ಮುಖಂಡ ಡಾ.ಸುಬ್ರಮಣಿಯನ್ ಸ್ವಾಮಿ ಅವರು ರಾಮ ಸೇತು ವಿಷಯವನ್ನು ಸುಪ್ರೀಂಕೋರ್ಟ್ ಮುಂದೆ ಪ್ರಸ್ತಾಪಿಸಿ, ಪಾರಂಪರಿಕ ಸ್ಮಾರಕವೆಂದು ಗುರುತಿಸಬೇಕೆಂಬ ಮನವಿಗೆ ಕೇಂದ್ರ ಸರ್ಕಾರ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.


ಮಾರ್ಚ್ 16, 2018 ರಂದು ಕೇಂದ್ರವು, ರಾಷ್ಟ್ರದ ಹಿತದೃಷ್ಟಿಯಿಂದ ರಾಮೇಶ್ವರಂ ಕರಾವಳಿಯಲ್ಲಿರುವ ಪೌರಾಣಿಕ ರಾಮ ಸೇತುವನ್ನು ತನ್ನ ಸೇತುಸಮುದ್ರಂ ಶಿಪ್ ಚಾನೆಲ್ ಯೋಜನೆಗಾಗಿ ಹಾನಿಗೊಳಿಸುವುದಿಲ್ಲ ಎಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿತ್ತು.


ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದ ನ್ಯಾಯಪೀಠವು ಅರ್ಜಿದಾರರಿಗೆ ಮೂರು ತಿಂಗಳ ನಂತರ ಈ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸುವಂತೆ ಸೂಚಿಸಿದೆ.

SCROLL FOR NEXT