ದೇಶ

#ಸಿಎಎ ಜಾರಿ ಬಳಿಕ ಬಾಂಗ್ಲಾದೇಶಕ್ಕೆ ವಾಪಸ್ ಆಗುತ್ತಿರುವ ಅಕ್ರಮ ವಲಸಿಗರ ಸಂಖ್ಯೆ ಗಣನೀಯ ಏರಿಕೆ: ಬಿಎಸ್ಎಫ್

Srinivasamurthy VN

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಳಿಕ ಗಡಿ ಮೂಲಕವಾಗಿ ಬಾಂಗ್ಲಾದೇಶಕ್ಕೆ ವಾಪಸಾಗುತ್ತಿರುವ ಅಕ್ರಮ ವಲಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ಹೇಳಿದೆ.

ಪೌರತ್ವ  ತಿದ್ದುಪಡಿ ಕಾಯ್ದೆಯ ಜಾರಿಯಿಂದ ಅಕ್ರಮ ವಲಸಿಗರಲ್ಲಿ ಆತಂಕ ಮನೆ ಮಾಡಿದ್ದು, ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದ ಬಳಿಕ ಬಾಂಗ್ಲಾದೇಶದ ಅಕ್ರಮ ವಲಸಿಗರು ತಮ್ಮ ದೇಶಕ್ಕೆ ಅಪಾರ ಸಂಖ್ಯೆಯಲ್ಲಿ ವಾಪಸ್ ಆಗುತ್ತಿದ್ದಾರೆ ಎಂದು ಬಿಎಸ್ಎಫ್ ಆಧಿಕಾರಿಗಳು ತಿಳಿಸಿದ್ದಾರೆ.

ಇಂಡೋ-ಬಾಂಗ್ಲಾ ಗಡಿ ಮೂಲಕ ಗಡಿ ದಾಟುತ್ತಿರುವ ಅಕ್ರಮ ವಲಸಿಗರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಜನವರಿ ಒಂದೇ ತಿಂಗಳಿನಲ್ಲಿ ಇಲ್ಲಿಯವರೆಗೆ 268 ಅಕ್ರಮ ವಲಸಿಗರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಬಿಎಸ್ಎಫ್ ಐಜಿ (ದಕ್ಷಿಣ ಬಂಗಾಳ ಫ್ರಾಂಟಿಯರ್) ವೈ.ಬಿ ಖುರಾನಿಯಾ ಮಾಹಿತಿ ನೀಡಿದ್ದಾರೆ.

'ಭಾರತದ ಗಡಿಯಿಂದ ಬಾಂಗ್ಲಾಗಡಿಗೆ ಅಕ್ರಮವಾಗಿ ಹೊರ ನುಸುಳುತ್ತಿದ್ದ, ಸುಮಾರು 250ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ. ದಕ್ಷಿಣ ಭಾರತದ ಬೆಂಗಳೂರು ಮತ್ತು ಉತ್ತರ ಭಾರತದ ಹಲವು ಪ್ರದೇಶಗಳಿಂದ ಇವು ಗಡಿ ಮೂಲಕ ಬಾಂಗ್ಲಾದೇಶಕ್ಕೆ ರಹಸ್ಯವಾಗಿ ತೆರಳುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲರೂ ಬೆಂಗಳೂರು ಇತರೆ ಮಹಾನಗರಗಳಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ವೈ.ಬಿ ಖುರಾನಿಯಾ ಹೇಳಿದ್ದಾರೆ.

SCROLL FOR NEXT