ದೇಶ

ರಾಷ್ಟ್ರ ವಿಭಜನೆ ಕೆಲಸದ ನಡುವೆ ಬಿಡುವಾದಾಗ ಓದಿ! ಸಂವಿಧಾನದ ಪ್ರತಿಯನ್ನು ಪ್ರಧಾನಿಗೆ ಕಳಿಸಿದ ಕಾಂಗ್ರೆಸ್

Raghavendra Adiga

ನವದೆಹಲಿ: 71 ನೇ ಗಣರಾಜ್ಯೋತ್ಸವದ ದಿನವಾದ ಭಾನುವಾರ ಕಾಂಗ್ರೆಸ್ ಸಂವಿಧಾನದ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಿಸಿದೆ."ನೀವು ದೇಶವನ್ನು ವಿಭಜಿಸುವ ಕೆಲಸದಿಂದ ಬಿಡುವಾದಾಗ ದಯವಿಟ್ಟು ಇದನ್ನು  ಓದಿ" ಎಂದು ಹೇಳಿದೆ.

ಸರ್ಕಾರವು ಸಂವಿಧಾನವನ್ನು ಮಟ್ಟಹಾಕುತ್ತಿದೆ ಎಂದು ಆರೋಪಿಸಿ ವಿರೋಧ ಪಕ್ಷವು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಲವಾರು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರುಗಳು ಇತ್ತೀಚೆಗೆ  ರಾಜ್‌ಘಾಟ್‌ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿರುವ  ವೀಡಿಯೊಗಳನ್ನೂ ಕಾಂಗ್ರೆಸ್ ಟ್ವೀಟ್ ಮಾಡಿದೆ.

"ಪ್ರಿಯ ಪ್ರಧಾನ ಮಂತ್ರಿ, ಸಂವಿಧಾನವು ಶೀಘ್ರದಲ್ಲೇ ನಿಮ್ಮನ್ನು ತಲುಪುತ್ತಿದೆ. ನೀವು ದೇಶವನ್ನು ವಿಭಜಿಸುವ ಕೆಲಸದಲ್ಲಿ ಸಮಯ ಸಿಕ್ಕಾಗ , ದಯವಿಟ್ಟು ಅದನ್ನು ಓದಿ. ಅಭಿನಂದನೆಗಳು" ಕಾಂಗ್ರೆಸ್ ಪಕ್ಷವು ಅಮೆಜಾನ್ ರಶೀದಿಯ ಸ್ನ್ಯಾಪ್‌ಶಾಟ್ ಜೊತೆಗೆ ಟ್ವೀಟ್ ಮಾಡಿದೆ. ಇದು ಸಂವಿಧಾನದ ಪ್ರತಿ ಎಂದು ಹೇಳಿರುವ ಪಕ್ಷ ಅದನ್ನು ಕೇಂದ್ರ ಸಚಿವಾಲಯಕ್ಕೆ ರವಾನಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

ಮತ್ತೊಂದು ಟ್ವೀಟ್‌ನಲ್ಲಿ, ಭಾರತೀಯ ಜನತಾ ಪಕ್ಷವು ಅರ್ಥಮಾಡಿಕೊಳ್ಳಲು ವಿಫಲವಾದ ಪಾಠವೆಂದರೆ, ಸಂವಿಧಾನದ 14ನೇ ಪರಿಚ್ಚೇದ. ಇದರಲ್ಲಿ ದೇಶದ  ಎಲ್ಲಾ ವ್ಯಕ್ತಿಗಳು ಧರ್ಮ, ಜಾತಿ, ಲಿಂಗ ಯಾವುದೇ ಆದರೂ ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸುತ್ತಾರೆ. ಆದರೆ ಸರ್ಕಾರದ ಪೌರತ್ವ ಕಾಯ್ದೆಯಿಂದಾಗಿ ಈ ಪರಿಚ್ಚೇದದ ಅರ್ಥ  ಸಂಪೂರ್ಣವಾಗಿ ಉಲ್ಲಂಘನೆಯಾಗಿದೆ ಎಂದು ಕೈ ಪಕ್ಷ  ಆರೋಪಿಸಿದೆ. . ಆದ್ದರಿಂದ, ತಾರತಮ್ಯದ ಆಧಾರದ ಮೇಲೆ ಕಾನೂನುಗಳನ್ನು ರೂಪಿಸುವ ಯಾವುದೇ ಪ್ರಯತ್ನವು ಅಸಂವಿಧಾನಿಕವಾಗಿದೆ" ಎಂದು ಅದು ಹೇಳಿದೆ.

SCROLL FOR NEXT