ದೇಶ

ರಕ್ತವನ್ನೇ ಹೆಪ್ಪುಗಟ್ಟಿಸುವ ಚಳಿಯಲ್ಲಿ 17000 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಐಟಿಬಿಪಿ ಯೋಧರು

Srinivasamurthy VN

ಲಡಾಖ್: ದೇಶಾದ್ಯಂತ 71ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ತೊಡಗಿದ್ದು, ಅತ್ತ ಲಡಾಖ್ ನಲ್ಲಿ ಇಂಡೋ ಟಿಬೆಟ್ ಬಾರ್ಡರ್ ಪೊಲೀಸರು ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವ ಆಚರಿಸಿದ್ದಾರೆ.

ಹೌದು.. ಇಂಡೋ-ಟಿಬೆಟ್ ಗಡಿಯಲ್ಲಿರುವ ಲಡಾಖ್ ನ ಸುಮಾರು 17 ಸಾವಿರ ಅಡಿ ಎತ್ತರದ ಯುದ್ಧ ಭೂಮಿಯಲ್ಲಿ ಐಟಿಬಿಪಿ ಯೋಧರು ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ರಕ್ತವನ್ನೇ ಹೆಪ್ಪುಗಟ್ಟಿಸುವಷ್ಟು ಭೀಕರ ಚಳಿಯಲ್ಲಿ ಯುದ್ಧಭೂಮಿಯನ್ನು ಸೈನಿಕರು ಕಾಯುತ್ತಿದ್ದು, ಈ ಭಯಂಕರ ಚಳಿಯನ್ನೂ ಲೆಕ್ಕಿಸದೇ ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವದ ಸಂಭ್ರಮಿಸಿದ್ದಾರೆ.

ಶ್ವೇತವರ್ಣದ ಸಮವಸ್ತ್ರವನ್ನು ಧರಿಸಿದ ಯೋಧರು ಸಾಲಾಗಿ ಸಾಗುತಾ ತ್ರಿವರ್ಣ ಧ್ವಜವನ್ನು ಹಾರಿಸಿ ಭಾರತ ಮಾತೆಗೆ ಜೈ ಎಂಬ ಘೋಷಣೆ ಕೂಗಿದರು. ಇನ್ನು ವಿಶ್ವದ ಅತ್ಯಂತ ರಣ ಭೀಕರ ಯುದ್ಧ ಭೂಮಿಗಳಲ್ಲಿ ಲಡಾಖ್ ಕೂಡ ಒಂದು. ಇಲ್ಲಿ ತಾಪಮಾನ ಮೈನಸ್ 20 ಡಿಗ್ರಿಗೆ ಕುಸಿದಿರುತ್ತದೆ. ಕೆಲವೇ ಸೆಕೆಂಟ್ ಗಳಲ್ಲಿ ಇಲ್ಲಿ ರಕ್ತವೇ ಹೆಪ್ಪುಗಟ್ಟುವಷ್ಟು ರಣ ಭೀಕರ ಚಳಿ ಇರುತ್ತದೆ.

SCROLL FOR NEXT