ದೇಶ

56 ಇಂಚಿನ ಎದೆಯ ಮೋದಿ ಸರ್ಕಾರ ಜನರ ಮುಂದೆ ಬಾಗಬೇಕು: ಯಶವಂತ್ ಸಿನ್ಹಾ

Lingaraj Badiger

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಅಸಂವಿಧಾನಿಕ ಎಂದಿರುವ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು, 56 ಇಂಚಿನ ಎದೆಯ ಸರ್ಕಾರ ದುರಹಂಕಾರ ಪ್ರದರ್ಶಿಸುವುದನ್ನು ಬಿಟ್ಟು, ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿರುವ ಜನರ ಮುಂದೆ ಬಾಗಬೇಕು ಎಂದು ಸೋಮವಾರ ಹೇಳಿದ್ದಾರೆ.

ಸಿಎಎ ಅನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ. ಈಗಾಗಲೇ ಎಲ್ಲರಿಗೂ ಪೌರತ್ವ ನೀಡುವ ಕಾಯ್ದೆ ಇದೆ. ಆದರೆ ಹೊಸ ತಿದ್ದುಪಡಿ ಕಾಯ್ದೆಯ ಅಗತ್ಯ ಇರಲಿಲ್ಲ ಎಂದಿದ್ದಾರೆ.

ಇಂದು ಲಖನೌನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿನ್ಹಾ, ದೇಶದಲ್ಲಿ ಸಿಎಎ ಜಾರಿಗೊಳಿಸಬಾರದು. ಹಳೆ ಕಾನೂನಿನ ಪ್ರಾಕಾರ ದೇಶದಲ್ಲಿ ಎಲ್ಲರಿಗೂ ಪೌರತ್ವ ನೀಡಲು ಅವಕಾಶ ಇದೆ ಎಂದರು.

ಪೌರತ್ವ ಕಾಯ್ದೆಗೆ ಧರ್ಮದ ಆಧಾರದ ಮೇಲೆ ತಿದ್ದುಪಡಿ ತರುವ ಅಗತ್ಯ ಇರಲಿಲ್ಲ. ಸಿಎಎ ವಿರೋಧಿ ಪ್ರತಿಭಟನೆ ನಡೆಸುತ್ತಿರುವ ಜನರಿಗೆ ಸ್ಪಂದಿಸುವುದು ಮತ್ತು ಅವರ ಸಮಸ್ಯೆ ಪರಿಹರಿಸಿ ದೇಶದಲ್ಲಿ ಶಾಂತಿಯ ವಾತಾವರಣವನ್ನು ಸೃಷ್ಟಿಸುವುದು ಸರ್ಕಾರದ ಕರ್ತವ್ಯ ಎಂದರು.

SCROLL FOR NEXT