ದೇಶ

ಬೋಡೊ ಉಗ್ರ ಸಂಘಟನೆಗಳ ಬಣಗಳೊಂದಿಗೆ ಕೇಂದ್ರ ಸರ್ಕಾರ ತ್ರಿಪಕ್ಷೀಯ ಒಪ್ಪಂದ

Lingaraj Badiger

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಈಶಾನ್ಯ ರಾಜ್ಯಗಳಲ್ಲಿ ಸುದೀರ್ಘ ಶಾಂತಿ ಸ್ಥಾಪಿಸಲು ಕೇಂದ್ರ ಸರ್ಕಾರ ಸೋಮವಾರ ನಿಷೇಧಿತ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್ ಡಿಎಫ್ ಬಿ)ನ ಎಲ್ಲ ಬಣಗಳ ಪ್ರತಿನಿಧಿಗಳೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕೇಂದ್ರ ಗೃಹ ಸಚಿವಾಲಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 
  
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. 
  
ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ ಮತ್ತು ಬೋಡೋ ಪ್ರತಿನಿಧಿಗಳ ನಡುವಿನ ಒಪ್ಪಂದ ಐತಿಹಾಸಿಕವಾಗಿದೆ. ಒಪ್ಪಂದವು ಅಸ್ಸಾಂ ರಾಜ್ಯ ಮತ್ತು ಬೋಡೋ ಸಮುದಾಯ ಜನರಿಗೆ ಸುವರ್ಣ ಭವಿಷ್ಯ ರೂಪಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
  
ಬೋಡೋ ಉಗ್ರರ ಸಂಘಟನೆಯ ಅನೇಕ ಬಣಗಳು ಅನೇಕ ವರ್ಷಗಳಿಂದ ನಡೆಸುತ್ತಿದ್ದ ಹಿಂಸಾಚಾರ ಈ ಒಪ್ಪಂದದಿಂದ ಕೊನೆಗೊಳ್ಳಲಿದೆ. ಜ 30ರಂದು 1550 ಉಗ್ರ ಸಂಘಟನೆಗಳ ಸದಸ್ಯರು 130 ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಲಿದ್ದಾರೆ. 

ಶರಣಾಗತಿಯಾಗುವ ಉಗ್ರರಿಗೆ ನೀಡಿರುವ ಭರವಸೆಯನ್ನು ಕಾಲಮಿತಿಯಲ್ಲಿ ಈಡೇರಿಸಲಾಗುವುದು ಎಂದು ಕೇಂದ್ರ ಗೃಹ 
ಸಚಿವನಾಗಿ ಹೇಳಲು ಇಚ್ಛಿಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.

SCROLL FOR NEXT