ದೇಶ

ಶಾಹೀನ್ ಬಾಗ್ ಸ್ಪೂರ್ತಿ, ಮುಂಬೈಯಲ್ಲಿ ಸಿಎಎ ವಿರೋಧಿಸಿ ಮಹಿಳೆಯರ ಪ್ರತಿಭಟನೆ 

Nagaraja AB

ಮುಂಬೈ: ನವದೆಹಲಿಯ ಶಾಹೀನ್ ಬಾಗ್ ಪ್ರತಿಭಟನೆಯಿಂದ ಸ್ಪೂರ್ತಿ ಪಡೆದು ಸಿಎಎ-ಎನ್ ಆರ್ ಸಿ ಹಾಗೂ ಎನ್ ಪಿಆರ್ ವಿರೋಧಿಸಿ ದಕ್ಷಿಣ ಮುಂಬೈಯ ನಾಗ್ ಪದ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ನೂರಾರು ಸಂಖ್ಯೆಯ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅರಬಿಯಾ ಹೋಟೆಲ್ ನ ಹೊರಗಡೆ ಮೊರ್ ಲ್ಯಾಂಡ್ ರಸ್ತೆಯಲ್ಲಿ ಕಳೆದ ರಾತ್ರಿಯಿಂದಲೂ ಕೈಯಲ್ಲಿ ಫಲಕಗಳನ್ನು ಹಿಡಿದು ಕುಳಿತಿರುವ ಮಹಿಳಾ ಪ್ರತಿಭಟನಾಕಾರರು, ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ವರದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಹುತೇಕ ಮಹಿಳೆಯರು ಮುಸ್ಲಿಂ ಪ್ರಾಬಲ್ಯದ ಮಾದನ್ ಪುರ, ಜೊಲಾ ಮೈದಾನ, ಅಪ್ರಿಪಾದ ಮತ್ತು ಮಧ್ಯ ಮುಂಬೈ ಪ್ರದೇಶದವರಾಗಿದ್ದಾರೆ.

ಪ್ರತಿಭಟನೆ ಹಿಂಪಡೆಯುವಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಮನವೊಲಿಕೆಗೂ ಬಗ್ಗದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲು ನಿರಾಕರಿಸದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ಬೆಳಗ್ಗೆ ತಿಳಿಸಿದ್ದಾರೆ.

ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ  ಹಾಗೂ ಶಾಹೀನ್ ಬಾಗ್ ಬಳಿ ಡಿಸೆಂಬರ್ 15 ರಂದು ಇದೇ ರೀತಿಯ ಪ್ರತಿಭಟನೆ ನಡೆದಿತ್ತು.

SCROLL FOR NEXT