ದೇಶ

ವಿನೂತನ ಶೈಲಿಯಲ್ಲಿ ಗಣಿತ ಪಾಠ; ಶಿಕ್ಷಕಿಯ ಚಾಕಚಕ್ಯತೆಗೆ ಶಾರುಖ್, ಆನಂದ್ ಮಹೀಂದ್ರಾ ಫಿದಾ

Srinivasamurthy VN

ಪಾಟ್ನಾ: ಬಿಹಾರದ ಶಾಲಾ ಶಿಕ್ಷಕಿಯೊಬ್ಬರು ವಿನೂತನವಾಗಿ ಗಣಿತ ಪಾಠ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದ್ದಾರೆ.

ಹೌದು.. ರೂಬಿ ಕುಮಾರಿ ಎಂಬ ಗಣಿತದ ಶಿಕ್ಷಕಿ ಮಕ್ಕಳಿಗೆ ವಿನೂತನ ರೀತಿಯಲ್ಲಿ ಮಗ್ಗಿ ಕಲಿಸಿಕೊಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೈ ಬೆರಳುಗಳನ್ನೇ ಕ್ಯಾಲ್ಕ್ಯುಸಲೇಟರ್ ಆಗಿ ಬಳಕೆ ಮಾಡಿಕೊಂಡು ಶಿಕ್ಷಕಿ ರೂಬಿ ಮಗ್ಗಿ ಹೇಳಿಕೊಡುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಎಂದರೆ ಸ್ವತಃ ಉದ್ಯಮಿ ಆನಂದ್ ಮಹೀಂದ್ರಾ, ಬಾಲಿವುಡ್ ನಟ ಶಾರುಖ್‌ಖಾನ್ ಸೇರಿದಂತೆ ಸಾಕಷ್ಟು ಜನರು ಲೈಕ್ ಮಾಡಿದ್ದಾರೆ.

'ಏನು? ಈ ಜಾಣತನದ ವಿಧಾನ ನನಗೆ ತಿಳಿದಿರಲಿಲ್ಲ. ಅವರು ನನ್ನ ಶಿಕ್ಷಕಿಯಾಗಿದ್ದರೆ ಗಣಿತದಲ್ಲಿ ನಾನು ಮತ್ತಷ್ಟು ಜಾಣನಾಗಿರುತ್ತದೆ ಎನಿಸುತ್ತದೆ' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಶಾರುಖ್ ಖಾನ್ ಅವರು, 'ನನ್ನ ಜೀವನದ ಎಷ್ಟು ಸಮಸ್ಯೆಗಳನ್ನು ಈ ಸರಳ ಲೆಕ್ಕಾಚಾರ ಪರಿಹರಿಸಿದೆ ಎಂದು ಹೇಳಲು ಅಸಾಧ್ಯ. ಈ ವಿಧಾನವನ್ನು ತಮ್ಮ ಶಿಕ್ಷಣ ವಿಧಾನದಲ್ಲಿ ಅಳವಡಿಸಿಕೊಳ್ಳಿ ಎಂದು ಬೈಜುಗೆ ಇದನ್ನು ಕಳುಹಿಸುತ್ತಿದ್ದೇನೆ' ಎಂದಿದ್ದಾರೆ. 

ಮೊದಲಿಗೆ ಬಿಹಾರ ಶೈಕ್ಷಣಿಕ ಯೋಜನಾ ಮಂಡಳಿಯ (ಬಿಇಪಿಸಿ) 'ಟೀಚರ್ಸ್ ಆಫ್ ಬಿಹಾರ್' ಫೇಸ್‌ಬುಕ್‌ ಪುಟದಲ್ಲಿ ಈ ವಿಡಿಯೊ ಪೋಸ್ಟ್ ಮಾಡಲಾಗಿತ್ತು. ಬಳಿಕ ಇದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾಗಿದೆ.

SCROLL FOR NEXT