ದೇಶ

ಮದುವೆ ಮಂಟಪದಿಂದ ಹಿಂದೂ ಯುವತಿ ಅಪಹರಣ: ಪಾಕ್ ಹೈ ಕಮೀಷನ್ ಅಧಿಕಾರಿಗೆ ಸಮನ್ಸ್ ನೀಡಿದ ಭಾರತ

Nagaraja AB

ನವದೆಹಲಿ: ಸಿಂಧೂ ಪ್ರಾಂತ್ಯದಲ್ಲಿ ಹಿಂದೂ ಯುವತಿಯೊಬ್ಬಳನ್ನು ಮದುವೆ ಮಂಟಪದಿಂದ ಅಪಹರಣ ಮಾಡಿರುವುದಕ್ಕೆ ಸಂಬಂಧಿಸಿದಂತೆ  ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಾಕಿಸ್ತಾನದ ಹೈ ಕಮೀಷನ್ ಹಿರಿಯ ಅಧಿಕಾರಿಗೆ ಭಾರತ ಇಂದು  ಸಮನ್ಸ್ ನೀಡಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ಈ ವಿಚಾರದ ಬಗ್ಗೆ ವಿಚಾರಣೆ ನಡೆಸಬೇಕು, ಅಲ್ಪಸಂಖ್ಯಾತ ಹಿಂದೂ ಸಮುದಾಯ ಸೇರಿದಂತೆ ಅಲ್ಲಿನ ನಾಗರಿಕರ ಕಲ್ಯಾಣ, ಸುರಕ್ಷತೆ ಹಾಗೂ ಭದ್ರತೆಯ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಭಾರತ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ.

ಇಂತಹ ಹೀನ ಕೃತ್ಯಗಳನ್ನು ಮಾಡಿರುವ ದುಷ್ಕರ್ಮಿಗಳನ್ನು  ಪತ್ತೆ ಹಚ್ಚಿ ನ್ಯಾಯ ಒದಗಿಸಲು ಪಾಕಿಸ್ತಾನ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಭಾರತ ಆಗ್ರಹಿಸಿದೆ. 

ಸಿಂಧೂ ಪ್ರಾಂತ್ಯದ ಹಲಾ ನಗರದ ಸ್ಥಳೀಯ ಪೊಲೀಸರ ಸಹಕಾರದಿಂದ ಜನವರಿ 25 ರಂದು ಮದುವೆ ಮಂಟಪದಿಂದ ಯುವತಿಯನ್ನು ಅಪಹರಿಸಲಾಗಿತ್ತು.

ಜನವರಿ 26 ರಂದು ಸಿಂಧೂ ಪ್ರಾಂತ್ಯದ ತಾರ್ಪರ್ ಕರ್ ನಲ್ಲಿನ ಮಾತಾ ರಾಣಿ ಬಾಟಿಯಾನಿ ದೇವಾಲಯ ವಿರೋಪಕ್ಕೆ ಸಂಬಂಧಿಸಿದಂತೆಯೂ ಪಾಕಿಸ್ತಾನ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಭಾರತ ಒತ್ತಾಯಿಸಿದೆ.

SCROLL FOR NEXT