ದೇಶ

59 ಚೈನೀಸ್ ಅಪ್ಲಿಕೇಶನ್‌ ನಿಷೇಧದ ಬೆನ್ನಲ್ಲೇ 'ವೇಬೋ' ಗೆ ಗುಡ್ ಬೈ ಹೇಳಿದ ಪಿಎಂ ಮೋದಿ

Raghavendra Adiga

ನವದೆಹಲಿ: ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ 59 ಚೀನೀ ಆ್ಯಪ್‌ಗಳನ್ನು ನಿಷೇಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಸೋಷಿಯಲ್ ಮೀಡಿಯಾ ಆ್ಯಪ್ ವೇಬೋ  ಅಕೌಂಟ್ ಡಿಯಾಕ್ಟಿವ್ ಮಾಡಿದ್ದಾರೆ. ಪ್ರಧಾನಿ ಮೋದಿ ವೇಬೋ  ನಲ್ಲಿ  ಸುಮಾರು 2.44 ಲಕ್ಷ ಅನುಯಾಯಿಗಳನ್ನು ಹೊಂದಿದ್ದರು.

59 ಚೈನೀಸ್ ಆ್ಯಪ್‌ಗಳ ನಿಷೇಧವನ್ನು ದೇಶ ಘೋಷಿಸಿದ ಕ್ಷಣದಿಂದ ಮೋದಿ ವೇಬೋ ತೊರೆಯಲು ತೀರ್ಮಾನಿಸಿದ್ದಾರೆ ಎಂದು ವಿಶ್ವಾಸಾರ್ಹ ಸರ್ಕಾರಿ ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ.

"59 ಚೀನೀ ಆ್ಯಪ್‌ಗಳನ್ನು ನಿಷೇಧಿಸುವ ಸರ್ಕಾರದ ಕ್ರಮದ ನಂತರ, ಪಿಎಂ ಮೋದಿ ಅವರು ಚೀನಾದ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ವೇಬೋ ದಿಂದ ನಿರ್ಗಮಿಸಿದ್ದಾರೆ" ಎಂದು ಬಿ.ಎಲ್. ಸಂತೋಷ್, ಬಿಜೆಪಿಯ ಪ್ರಧಾನ ಕಾರ್ಯದರ್ಶಿಹೇಳಿದ್ದಾರೆ.

ಪ್ರೈಮ್ ಮಿನಿಸ್ಟರ್ ಅವರ ವೇಬೊ ಖಾತೆಯಲ್ಲಿನ ಎಲ್ಲಾ ಪೋಸ್ಟ್‌ಗಳು, ಚಿತ್ರಗಳು ಮತ್ತು ಕಾಮೆಂಟ್‌ಗಳನ್ನು ಅಳಿಸಲಾಗಿದೆ, ಇದರಲ್ಲಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಫೋಟೋಗಳನ್ನು ಹೊಂದಿದ್ದ ಎರಡು ಪೋಸ್ಟ್‌ಗಳು ಸೇರಿವೆ.

SCROLL FOR NEXT