ದೇಶ

ಸಾಮಾಜಿಕ ಅಂತರ, ವರ್ಚುವಲ್ ಹಾಜರಾತಿ ಮೂಲಕ ಮುಂಗಾರು ಅಧಿವೇಶನ ನಡೆಸಲು ರಾಜ್ಯಸಭೆ ಸಚಿವಾಲಯ ಚಿಂತನೆ

Sumana Upadhyaya

ನವದೆಹಲಿ: ಕೋವಿಡ್-19ನ ಈ ಸಂಕಷ್ಟ ಕಾಲದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಮುಂಬರುವ ಮುಂಗಾರು ಅಧಿವೇಶನದಲ್ಲಿ ದೇಶದ ಶಕ್ತಿ ಕೇಂದ್ರ ಸಂಸತ್ತಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಆಸನ ವ್ಯವಸ್ಥೆ ಮಾಡಲು ರಾಜ್ಯ ಸಭಾ ಸಚಿವಾಲಯ ಸಿದ್ಧವಾಗಿದೆ.

ರಾಜ್ಯಸಭಾ ಸದಸ್ಯರ ಆಸನ ವ್ಯವಸ್ಥೆಯನ್ನು ಚೇಂಬರ್ ಮತ್ತು ಗ್ಯಾಲರಿಯಲ್ಲಿ ಸಾಮಾಜಿಕ ಅಂತರಗಳೊಂದಿಗೆ ವ್ಯವಸ್ಥೆಗೊಳಿಸಿ ಸಂಸತ್ತಿನ ಸೆಂಟ್ರಲ್ ಹಾಲ್ ಅಥವಾ ಬಾಲಯೋಗಿ ಆಡಿಟೊರಿಯಂನಿಂದ ಉಳಿದ ಸದಸ್ಯರು ವರ್ಚುವಲ್ ಭಾಗವಹಿಸುವಿಕೆ ಮೂಲಕ ಸಂಸತ್ತಿನ ಮುಂಗಾರು ಅಧಿವೇಶನ ನಡೆಸಲು ಸಚಿವಾಲಯ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಾಜ್ಯಸಭೆಯ ಚೇಂಬರ್ ಮತ್ತು ಗ್ಯಾಲರಿಗಳಲ್ಲಿ 127 ಮಂದಿ ಸದಸ್ಯರು ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಮಾಧ್ಯಮ ಗ್ಯಾಲರಿ ಹೊರತುಪಡಿಸಿ ಉಳಿದೆಲ್ಲಾ ಗ್ಯಾಲರಿಗಳನ್ನು ಸದಸ್ಯರ ಆಸನ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತದೆ.

ಸಂಸತ್ತಿನ ಮುಂಗಾರು ಅಧಿವೇಶನ ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ನಡೆಯುವ ಸಾಧ್ಯತೆಯಿದೆ. ಅಧಿವೇಶನ ಹೇಗೆ ನಡೆಸಬಹುದು ಎಂಬ ಬಗ್ಗೆ ಚರ್ಚಿಸಲು ನಿನ್ನೆ ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಸಭೆ ನಡೆಸಿದ್ದರು.

SCROLL FOR NEXT