ವೆಂಕಯ್ಯ ನಾಯ್ಡು 
ದೇಶ

ಸ್ವಾವಲಂಭಿ ಭಾರತ: 'ಲೋಕಲ್' ಭಾರತವನ್ನು 'ಗ್ಲೋಕಲ್' ಆಗಿ ಪರಿವರ್ತಿಸಲು ವೆಂಕಯ್ಯ ನಾಯ್ಡು ಕರೆ

ದೇಶದ ಪ್ರತಿ ನಾಗರಿಕ ಕೂಡ "ಸ್ಥಳೀಯ ಭಾರತ"ವನ್ನು "ಗ್ಲೋಕಲ್ ಇಂಡಿಯಾ" (ಗ್ಲೋಬಲ್ ಮತ್ತು ಲೋಕಲ್) ಆಗಿ ಪರಿವರ್ತಿಸುವ 'ಸ್ವಾವಲಂಬಿ ಭಾರತ' ಅಭಿಯಾನ ಕೈಗೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.

ನವದೆಹಲಿ: ದೇಶದ ಪ್ರತಿ ನಾಗರಿಕ ಕೂಡ "ಸ್ಥಳೀಯ ಭಾರತ"ವನ್ನು "ಗ್ಲೋಕಲ್ ಇಂಡಿಯಾ" (ಗ್ಲೋಬಲ್ ಮತ್ತು ಲೋಕಲ್) ಆಗಿ ಪರಿವರ್ತಿಸುವ 'ಸ್ವಾವಲಂಬಿ ಭಾರತ' ಅಭಿಯಾನ ಕೈಗೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ. 

ಉಪರಾಷ್ಟ್ರಪತಿ ನಿವಾಸದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲಿಮೆಂಟ್ ಮೊಬೈಲ್ ಅಪ್ಲಿಕೇಶನ್‌ನ ವರ್ಚುವಲ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆ ವೃದ್ಧಿಗೆ ಸೂಕ್ತ ಪರಿಸರ ವ್ಯವಸ್ಥೆ ರಚಿಸಬೇಕೆಂದು ಕರೆ ನೀಡಿದರು. 

ಆಧುನಿಕ ತಂತ್ರಜ್ಞಾನ, ಮಾನವ ಸಂಪನ್ಮೂಲದ ಸದ್ಭಳಕೆ, ಪೂರೈಕೆ ಸರಣಿಯನ್ನು ರಚಿಸುವ ಮೂಲಕ ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ ದೇಶದ ಆರ್ಥಿಕ ಸಾಮರ್ಥ್ಯಕ್ಕೆ ಒತ್ತು ನೀಡುವುದು ಸ್ವಾವಲಂಬಿ ಭಾರತ ಅಭಿಯಾನದ ಉದ್ದೇಶ ಎಂದರು. 

ಸ್ವಾವಲಂಬಿ ಭಾರತ' ಅಭಿಯಾನ ಯಾವುದೇ ರಕ್ಷಣಾತ್ಮಕತೆ ಅಥವಾ ಪ್ರತ್ಯೇಕತೆಯ ಕರೆಯಲ್ಲ, ಆದರೆ ಉದ್ಯಮಶೀಲತೆಯನ್ನು ಬೆಳೆಸುವ, ನಾವೀನ್ಯತೆಯನ್ನು ಪೋಷಿಸುವ ಮತ್ತು ಗ್ರಾಮೀಣ ಮತ್ತು ನಗರದ ಸಹಜೀವನದ ಅಭಿವೃದ್ಧಿಗೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಯೋಜನೆಯಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

E20 Petrol: ವೈಜ್ಞಾನಿಕ ಪರೀಕ್ಷೆಗಳಲ್ಲಿ ಸುರಕ್ಷಿತ, ವಾಹನಗಳಿಗೆ ಅತ್ಯುತ್ತಮ; ತಜ್ಞರ ಸಮರ್ಥನೆ

ಮೆಲ್ಬೋರ್ನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಆಸ್ಟ್ರೇಲಿಯಾದಿಂದ ತನಿಖೆ

Cricket: ಸಚಿನ್ ಅಲ್ಲ.. ಸೂರ್ಯವಂಶಿ ಅಲ್ಲವೇ ಅಲ್ಲ.. ಐತಿಹಾಸಿಕ ಪದಾರ್ಪಣೆ ಹೊರತಾಗಿಯೂ ಈ ಆಟಗಾರನ ದಾಖಲೆ ಮುರಿಯುವಲ್ಲಿ ವಿಫಲ!

2nd T20I: Debut ಪಂದ್ಯದಲ್ಲೇ Vaibhav Sooryavanshi ಝಲಕ್, ಇಂಗ್ಲೆಂಡ್ ಗೆ ಗೆಲ್ಲಲು 191 ರನ್ ಸವಾಲಿನ ಗುರಿ ನೀಡಿದ ಭಾರತ!