ದೇಶ

ಠಾಕ್ರೆ ಸರ್ಕಾರ ಪತನಗೊಳಿಸಲು ಬಿಜೆಪಿ ಪಿತೂರಿ- ಸಂಜಯ್ ರಾವತ್ ಆರೋಪ

Nagaraja AB

ಮುಂಬೈ: ಅಕ್ಟೋಬರಿಗೂ ಮುಂಚಿತವಾಗಿ ಉದ್ದವ್ ಠಾಕ್ರೆ ಸರ್ಕಾರವನ್ನು ಪತನಗೊಳಿಸಲು ಪ್ರತಿಪಕ್ಷ ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಆರೋಪಿಸಿದ್ದಾರೆ.

ಇತ್ತೀಚಿಗೆ ಖಾಲಿಯಾಗಿರುವ ವಿಧಾನಪರಿಷತ್ತಿನ 12 ಸ್ಥಾನಗಳನ್ನು ಅಕ್ಟೋಬರ್ ಮುಂಚಿತವಾಗಿ ತುಂಬುವ ಮೂಲಕ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಇದು ಸಾಧ್ಯವಿಲ್ಲ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿನ ಸಂಪಾದಕೀಯದಲ್ಲಿ ಸಂಜಯ್ ರಾವತ್ ಈ ರೀತಿ ಹೇಳಿದ್ದಾರೆ.

ರಾಜಭವನ ಹಾಗೂ ರಾಜ್ಯಪಾಲರನ್ನು  ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯ ನಿಯಂತ್ರಿಸುತ್ತಿದೆ.ವಿಧಾನಪರಿಷತ್ ನಲ್ಲಿ ಖಾಲಿಯಾಗಿರುವ  12 ಸ್ಥಾನಗಳಿಗೆ ಸದಸ್ಯರನ್ನು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಭರ್ತಿ ಮಾಡಬೇಕಾಗಿದೆ. ಈ ಸ್ಥಾನಗಳು ರಾಜ್ಯಪಾಲರ ಕೋಟಾದಡಿಯಲ್ಲಿ ಬರಲಿವೆ.ಕಲೆ, ಸಾಹಿತ್ಯ, ಕ್ರೀಡೆ ಮತ್ತಿತರ ಕ್ಷೇತ್ರಗಳಿಂದ ಬಂದಂತಹ ವ್ಯಕ್ತಿಗಳನ್ನು  ವಿಧಾನಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಬೇಕಾಗಿದೆ.ಈ ವರ್ಷದ ಅಕ್ಟೋಬರ್ ಗೂ ಮುಂಚಿತವಾಗಿ ರಾಜ್ಯಪಾಲರು ಇವುಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ  ಎಂದು ಅವರು ಹೇಳಿದ್ದಾರೆ.

12 ಸ್ಥಾನಗಳನ್ನು ಭರ್ತಿ ಮಾಡಿಕೊಡುವ ಮೂಲಕ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಬಂದಿದೆ.ಅದಕ್ಕೆ ನಾವು ಅವಕಾಶ ಮಾಡಿಕೊಡುತ್ತೇವೆ ಎಂಬ ಹಗಲು ಗನಸಿನಲ್ಲಿ ಬಿಜೆಪಿಯವರಿದ್ದಾರೆ ಎಂದು ರಾವತ್ ತಿಳಿಸಿದ್ದಾರೆ. 

ಮಹಾ ವಿಕಾಸ್ ಆಘಾದಿ ಸರ್ಕಾರವನ್ನು ಪತನಗೊಳಿಸುವಲ್ಲಿ ಬಿಜೆಪಿಗೆ ಆಸಕ್ತಿ ಇಲ್ಲ,ಸರ್ಕಾರ ತಾನಾಷ್ಟಕ್ಕೆ ತಾನೇ ಪತನಗೊಳ್ಳಲಿದೆ ಎಂದು ಪ್ರತಿಪಕ್ಷ ನಾಯಕ  ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

SCROLL FOR NEXT