ದೇಶ

ಮುಂಬೈ, ಥಾಣೆ ಸುತ್ತಮುತ್ತ ಭಾರೀ ಮಳೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ

Sumana Upadhyaya

ಮುಂಬೈ: ಮಹಾರಾಷ್ಟ್ರದ ಮುಂಬೈ, ಥಾಣೆ, ಕೊಂಕಣ ಮಹಾರಾಷ್ಟ್ರ ಸೇರಿದಂತೆ ಹಲವು ಭಾಗಗಳಲ್ಲಿ ಸತತ ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಮುಂಬೈ ಮೆಟ್ರೊಪಾಲಿಟನ್ ನಗರದ ಹಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜಲಾವೃತವಾಗಿದೆ.

ಮುಂದಿನ 24 ಗಂಟೆಗಳವರೆಗೆ ಇಲ್ಲಿ ಭಾರೀ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಮುಂಬೈಯ ಕೊಲಬಾದಲ್ಲಿ 129.6 ಮಿಲಿ ಮೀಟರ್ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ. ಪಶ್ಚಿಮ ಉಪ ನಗರದ ಸಾಂತಕ್ರೂಸ್ ಹವಾಮಾನ ಕೇಂದ್ರದಲ್ಲಿ 200.8 ಮಿಲಿ ಮೀಟರ್ ಮಳೆ ದಾಖಲಾಗಿದೆ.

ನೆರೆಯ ಥಾಣೆ ಮತ್ತು ಕೊಂಕಣ ಭಾಗದ ಪ್ರದೇಶಗಳಲ್ಲಿ ಸಿಂಧುದುರ್ಗ ಮೊದಲಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ.ಮುಂಬೈಯ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಗೆ ನೀರು ತುಂಬಿ ಸಂಚಾರ ದಟ್ಟಣೆ ಉಂಟಾಯಿತು. ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ಮಳೆಗೆ ಮರ ಮತ್ತು ಮರದ ಕೊಂಬೆಗಳು ಬಿದ್ದ 19 ದೂರುಗಳು ಬಂದಿವೆ.

SCROLL FOR NEXT