ದೇಶ

ಭಾರತದಲ್ಲಿ ಕೋವಿಡ್ ನಿಂದ ಸಾವನ್ನಪ್ಪುವವರ ಪ್ರಮಾಣ ಶೇ. 2.72ಕ್ಕೆ ಇಳಿಕೆ

Raghavendra Adiga

ನವದೆಹಲಿ: ಭಾರತದ ಕೋವಿಡ್ -19 ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 2.72 ಕ್ಕೆ ಇಳಿದಿದೆ, ಇದು ಇತರ ದೇಶಗಳಿಗೆ ಹೋಲಿಸಿದರೆ ಬಹಳವೇ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಮರಣ ಪ್ರಮಾಣ ಕಡಿಮೆ ಇದೆ ಎಂದು ಸಚ್ವಾಲಯ ಪ್ರಕಟಣೆ ಹೇಳಿದೆ. ಅಲ್ಲದೆ, ಚೇತರಿಕೆ ದರದಲ್ಲಿ ಏರಿಕೆಯಾಗುವ ಪ್ರವೃತ್ತಿ ಮುಂದುವರಿದಿದ್ದು ಶುಕ್ರವಾರ ಶೇಕಡಾ 62.42 ರಷ್ಟಿದೆ. 18 ರಾಜ್ಯಗಳು ಮತ್ತುಕೇಂದ್ರಾಡಳಿತ ಪ್ರದೇಶಗಳಲ್ಲಿ ಚೇತರಿಕೆ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ.

"ರಾಷ್ಟ್ರಮಟ್ಟದ ಸರಾಸರಿ ಸಾವಿನ ಪ್ರಮಾಣವು ಶೇಕಡಾ 2.72 ಕ್ಕೆ ಇಳಿದಿದೆ. ಇದು ವಿಶ್ವದ ಇತರ ದೇಶಗಳಲ್ಲಿ ಕಂಡುಬರುವ ಸಾವಿನ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಕೋವಿಡ್ -19 ನಿರ್ವಹಣೆಯಮಾದರಿಯು ಹೆಚ್ಚಿನ ಸಾವುನೋವುಗಳನ್ನು ತಗ್ಗಿಸಿದೆ "

ಕೇಂದ್ರ ಸರ್ಕಾರದ ಬೆಂಬಲ ಮತ್ತು ಮಾರ್ಗದರ್ಶನದೊಂದಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಾಧಿತರಾಗುವವರಿಗೆ ಹಾಗೂ ವೃದ್ದರು,. ಮಕ್ಕಳ ಮೇಲೆ ವಿಶೇಷ ಕಾಳಜಿಯನ್ನು ನೀಡುವಂತಹ ಹಲವು ಕ್ರಮಗಳನ್ನು ಕೈಗೊಂಡಿವೆ ಎಂದು ಸಚಿವಾಲಯ ಹೇಳಿದೆ. 

ಕೊರೋನಾವೈರಸ್ ರೋಗಿಗಳಿಗೆ ವೈದ್ಯಕೀಯ ಆರೈಕೆಯ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಲಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಜೊತೆಗೆ ದೇಶಾದ್ಯಂತದ ಆಶಾ ಕಾರ್ಯಕರ್ತರು ಎಎನ್‌ಎಂಗಳ ಬಲವಾದ ಜಾಲವು ಲಕ್ಷಾಂತರ  ವಲಸಿಗರ ಸ್ವಂತ ಊರಿಗೆ ಹಿಂತಿರುಗಿದವರ  ಪರಿಣಾಮಕಾರಿ ಕಣ್ಗಾವಲು ಮತ್ತು ಸಂಪರ್ಕವನ್ನು ಪತ್ತೆಹಚ್ಚಲು ಸಹಾಯ ಮಾಡಿದೆ ಎಂದು ಅದು ಹೇಳಿದೆ.

ಕೇರಳ (0.41 ಪಿಸಿ), ಜಾರ್ಖಂಡ್ (0.71 ಪಿಸಿ), ಬಿಹಾರ (0.82 ಪಿಸಿ), ತೆಲಂಗಾಣ (1.07 ಪಿಸಿ), ತಮಿಳುನಾಡು (1.39 ಪಿಸಿ), ಹರಿಯಾಣವನ್ನು ಒಳಗೊಂಡಿರುವ ರಾಷ್ಟ್ರೀಯ ಸರಾಸರಿಗಿಂತ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಕಡಿಮೆ ಗಳು ಸಾವಿನ ಪ್ರಮಾಣ ಹೊಂದಿದೆ.  ಮಣಿಪುರ, ನಾಗಾಲ್ಯಾಂಡ್, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಹಾಗೂ ದಿಯು , ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಸಿಕ್ಕಿಂನಲ್ಲಿಸಾವಿನ ಪ್ರಮಾಣ  ಶೂನ್ಯ ವಾಗಿದೆ. 

ಚೇತರಿಕೆ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ  ಪಶ್ಚಿಮ ಬಂಗಾಳ (64.94 ಪಿಸಿ), ಉತ್ತರ ಪ್ರದೇಶ (65.28 ಪಿಸಿ), ಒಡಿಶಾ (66.13 ಪಿಸಿ), ಜಾರ್ಖಂಡ್ (68.02 ಪಿಸಿ), ಪಂಜಾಬ್ (69.26 ಪಿಸಿ), ಬಿಹಾರ (70.40 ಪಿಸಿ), ಗುಜರಾತ್ (70.72 ಪಿಸಿ), ಮಧ್ಯಪ್ರದೇಶ ( 74.85 ಪಿಸಿ), ಹರಿಯಾಣ (74.91 ಪಿಸಿ), ರಾಜಸ್ಥಾನ (75.65 ಪಿಸಿ) ಮತ್ತು ದೆಹಲಿ (76.81 ಪಿಸಿ) ಸೇರಿದೆ.

ಶುಕ್ರವಾರ, ಭಾರತವು 26,506 ಕೋವಿಡ್ -19 ಪ್ರಕರಣಗಳೊಂದಿಗೆ ದಾಖಲೆಯ 7,93,802ಕ್ಕೆ ತಲುಪಿದೆ. ಸಾವಿನ ಸಂಖ್ಯೆ 21,604 ಕ್ಕೆ ಏರಿಕೆಯಾಗಿದ್ದು  475 ಜನರು 24 ಗಂಟೆಗಳಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.

SCROLL FOR NEXT