ದೇಶ

ಕೊವಿಡ್-19: ಪುಣೆಯಲ್ಲಿ ಜುಲೈ 14 ರಿಂದ 10 ದಿನ ಸಂಪೂರ್ಣ ಲಾಕ್ ಡೌನ್

Lingaraj Badiger

ಪುಣೆ: ಮಹಾಮಾರಿ ಕೊರೋನಾ ವೈರಸ್ ಕಟ್ಟಿಹಾಕುವುದಕ್ಕಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಜುಲೈ 14 ರಿಂದ ಎರಡು ಹಂತಗಳಲ್ಲಿ 10 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.

ಪುಣೆ ಮತ್ತು ಪಿಂಪ್ರಿ ಚಿಂಚವಾಡ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತು ನಗರ ಪಾಲಿಕೆಯ ಗಡಿಯಲ್ಲಿರುವ 22 ಗ್ರಾಮಗಳಲ್ಲಿ ಜುಲೈ 14 ರಿಂದ 10 ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಆಡಳಿತ ಮತ್ತು ಮಹಾನಗರ ಪಾಲಿಕೆ ತಿಳಿಸಿದೆ.

ನಗರದಲ್ಲಿ ಕೊರೋನಾ ಚೈನ್ ಕಟ್ ಮಾಡುವುದಕ್ಕಾಗಿ ಲಾಕ್ ಡೌನ್ ಅನಿವಾರ್ಯ ಎಂದು ಪುಣೆ ವಿಭಾಗೀಯ ಆಯುಕ್ತ ದೀಪಕ್ ಮೈಸೆಕರ್ ಅವರು ಹೇಳಿದ್ದಾರೆ.

ಜುಲೈ 14 ರಿಂದ ಜುಲೈ 18ರ ವರೆಗೆ ಮೊದಲ ಐದು ದಿನ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಈ ಅವಧಿಯಲ್ಲಿ ಹಾಲು, ಹಣ್ಣು, ತರಕಾರಿ, ಆಸ್ಪತ್ರೆ ಮತ್ತು ಮೆಡಿಕಲ್ ಸ್ಟೋರ್ ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.

ಜುಲೈ 18ರಿಂದ ಜುಲೈ 23ರ ವರೆಗೆ ಎರಡನೇ ಹಂತದಲ್ಲಿ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

SCROLL FOR NEXT