ಸಿಬ್ಬಂದಿಯಿಂದ ಕೀಟನಾಶಕ ಸಿಂಪಡಣೆ 
ದೇಶ

ಈ ಮಳೆಗಾಲದಲ್ಲಿ ಮತ್ತೊಂದು ವೈರಸ್ ಸಮಸ್ಯೆ?: ಕೋವಿಡ್-19 ಜೊತೆಗೆ ಡೆಂಗ್ಯು ಜ್ವರ ವೈದ್ಯಲೋಕಕ್ಕೆ ಸವಾಲು

ನಮ್ಮ ದೇಶ ಸೇರಿದಂತೆ ಇಂದು ವಿಶ್ವಾದ್ಯಂತ ಕಾಡುತ್ತಿರುವ ಆರೋಗ್ಯ ಸಮಸ್ಯೆ ಕೋವಿಡ್-19. ಮುಂಗಾರು ಮಳೆ ಸತತವಾಗಿ ದೇಶಾದ್ಯಂತ ಸುರಿಯುತ್ತಿದೆ. ಇದರ ಜೊತೆಗೆ ಈ ಮಳೆಯಲ್ಲಿ ಸೊಳ್ಳೆಯಿಂದ ಹುಟ್ಟಿಕೊಳ್ಳುವ ಡೆಂಗ್ಯು ಜ್ವರ ಕೂಡ ಕಾಣಿಸಿಕೊಳ್ಳುತ್ತಿದ್ದು ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಯಕರ್ತರು, ವೈದ್ಯರಿಗೆ ತಲೆಬಿಸಿಯಾಗಿದೆ.

ನವದೆಹಲಿ: ನಮ್ಮ ದೇಶ ಸೇರಿದಂತೆ ಇಂದು ವಿಶ್ವಾದ್ಯಂತ ಕಾಡುತ್ತಿರುವ ಆರೋಗ್ಯ ಸಮಸ್ಯೆ ಕೋವಿಡ್-19. ಮುಂಗಾರು ಮಳೆ ಸತತವಾಗಿ ದೇಶಾದ್ಯಂತ ಸುರಿಯುತ್ತಿದೆ. ಇದರ ಜೊತೆಗೆ ಈ ಮಳೆಯಲ್ಲಿ ಸೊಳ್ಳೆಯಿಂದ ಹುಟ್ಟಿಕೊಳ್ಳುವ ಡೆಂಗ್ಯು ಜ್ವರ ಕೂಡ ಕಾಣಿಸಿಕೊಳ್ಳುತ್ತಿದ್ದು ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಯಕರ್ತರು, ವೈದ್ಯರಿಗೆ ತಲೆಬಿಸಿಯಾಗಿದೆ.

ಒಂದೆಡೆ ಕೋವಿಡ್-19 ಮತ್ತೊಂದೆಡೆ ಡೆಂಗ್ಯು ಜ್ವರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾದಿಯರಿಗೆ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ. ಇಂದು ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8 ಲಕ್ಷದ 20 ಸಾವಿರದ 916 ಆಗಿದ್ದು 22 ಸಾವಿರದ 123 ಮಂದಿ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಡೆಂಗ್ಯು ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. 2016ರಿಂದ 2-19ರ ನಡುವಿನ ಅಂಕಿಅಂಶ ಪ್ರಕಾರ ದೇಶದಲ್ಲಿ ಪ್ರತಿವರ್ಷ 1ರಿಂದ 2 ಲಕ್ಷ ಮಂದಿ ಡೆಂಗ್ಯು ಜ್ವರಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ 2019ರಲ್ಲಿ 1 ಲಕ್ಷದ 36 ಸಾವಿರದ 422 ಡೆಂಗ್ಯು ಪ್ರಕರಣಗಳು ವರದಿಯಾಗಿದ್ದು 132 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವೆಕ್ಟರ್ ರೋಗ ನಿಯಂತ್ರಣ ಕಾರ್ಯಕ್ರಮ(ಎನ್ ವಿಬಿಡಿಸಿಪಿ) ಹೇಳಿದೆ.

ಎರಡೂ ವೈರಸ್ ಗಳು ಒಂದಕ್ಕೊಂದು ಪೂರಕವಾಗಿ ಈ ವರ್ಷ ಮತ್ತಷ್ಟು ಅದರ ಕರಾಳ ಪ್ರಭಾವ ಬೀರಲಿದೆ ಎಂದು ಅಂದಾಜಿಸಿದ್ದಾರೆ ಕೋಲ್ಕತ್ತಾದ ಅಮಿಟಿ ವಿಶ್ವವಿದ್ಯಾಲಯದ ಉಪ ಕುಲಪತಿ ಮತ್ತು ವೈರಾಲಜಿಸ್ಟ್ ಧ್ರುಬ್ ಜ್ಯೋತಿ ಚಟ್ಟೋಪಾಧ್ಯಾಯ ಹೇಳುತ್ತಾರೆ.

ಕೋವಿಡ್-19 ಮತ್ತು ಡೆಂಗ್ಯು ಜ್ವರ ಎರಡೂ ಒಂದೇ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಅತಿ ಜ್ವರ, ತಲೆನೋವು, ಮೈಕೈ ನೋವು ಲಕ್ಷಣಗಳಾಗಿವೆ. ಮಳೆಗಾಲದಲ್ಲಿ ಸೊಳ್ಳೆ ಕಾಟ ವಿಪರೀತವಾಗಿರುವುದರಿಂದ ಕೋವಿಡ್ ಮತ್ತು ಡೆಂಗ್ಯು ಜ್ವರ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದರು.

ಕೋವಿಡ್-19 ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್, ವೈದ್ಯಕೀಯ ಸೌಲಭ್ಯಕ್ಕೆ ಸಮಸ್ಯೆಯಿರುವಾಗ ಡೆಂಗ್ಯು ಜ್ವರವೂ ಸೇರಿಕೊಂಡರೆ ಆರೋಗ್ಯ ವಲಯ ಸೇವೆಗೆ ಖಂಡಿತಾ ಈ ವರ್ಷ ದೊಡ್ಡ ಸವಾಲು ಎಂಬುದರಲ್ಲಿ ಸಂಶಯವೇ ಇಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT