ದೇಶ

ರಾಜಸ್ತಾನ ಸರ್ಕಾರ ಉರುಳಿಸಲು ಶಾಸಕರಿಗೆ ಹಣದ ಆಮಿಷವೊಡ್ಡಿದ ಆರೋಪ, 3 ಸ್ವತಂತ್ರ ಶಾಸಕರ ವಿರುದ್ಧ ಎಫ್ಐಆರ್

Sumana Upadhyaya

ಜೈಪುರ್: ರಾಜಸ್ತಾನದಲ್ಲಿ ಅಶೋಕ್ ಗೆಹ್ಲೊಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವುದರ ಮಧ್ಯೆ ಅಲ್ಲಿನ ಭ್ರಷ್ಟಾಚಾರ ವಿರೋಧಿ ದಳ ಮೂವರು ಸ್ವತಂತ್ರ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಅಜ್ಮರ್ ಕ್ಷೇತ್ರದ ಶಾಸಕ ಓಂ ಪ್ರಕಾಶ್ ಹೂಡ್ಲ, ಪಾಲಿ ಜಿಲ್ಲೆಯ ಮತ್ತಿಬ್ಬರು ಸ್ವತಂತ್ರ ಶಾಸಕರಾದ ಸುರೇಶ್ ಟಾಂಕ್, ಖುಷ್ ವೀರ್ ಸಿಂಗ್ ವಿರುದ್ಧ ನಿನ್ನೆ ಎಫ್ ಐಆರ್ ದಾಖಲಾಗಿದೆ. ಉಳಿದ ಶಾಸಕರನ್ನು ಸೆಳೆದುಕೊಂಡು ರಾಜಸ್ತಾನದಲ್ಲಿ ಚುನಾಯಿತ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದರು ಎಂಬ ಆರೋಪ ಕೇಳಿಬರುತ್ತಿದೆ.

ತಮ್ಮ ಸರ್ಕಾರದ ಮೈತ್ರಿ ಸದಸ್ಯರ ಪಟ್ಟಿಯಿಂದ ಕಾಂಗ್ರೆಸ್ ಈ ಮೂವರು ಶಾಸಕರನ್ನು ತೆಗೆದುಹಾಕಿದೆ. ಈ ಮೂವರು ಶಾಸಕರು ಬನ್ಸ್ವಾರ ಮತ್ತು ದುಂಗಾರ್ಪುರ್ ಗೆ ತೆರಳಿ ಅಲ್ಲಿ ಶಾಸಕರಿಗೆ ಹಣದ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಎಸಿಬಿ ಡಿಜಿ ಡಾ ಅಲೋಕ್ ತ್ರಿಪಾಠಿ ಇದನ್ನು ಖಚಿತಪಡಿಸಿದ್ದು ಭ್ರಷ್ಟಾಚಾರ ಕಾಯ್ದೆಯಡಿ ತನಿಖೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

SCROLL FOR NEXT