ದೇಶ

ಸೇನಾಪಡೆ ಹಿಂಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್

Sumana Upadhyaya

ನವದೆಹಲಿ: ಪೂರ್ವ ಲಡಾಕ್ ನಲ್ಲಿ ಗಡಿ ವಾಸ್ತವ ರೇಖೆಯಲ್ಲಿ ಸೇನಾಪಡೆಯನ್ನು ಹಿಂತೆಗೆದುಕೊಂಡು ಗಡಿಯಲ್ಲಿನ ಉದ್ವಿಗ್ನ ಸ್ಥಿತಿಯನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾ ದೇಶಗಳು ಪ್ರಯತ್ನ ಮುಂದುವರಿಸಿದೆ.

ಈ ಮಧ್ಯೆ ಗಡಿಯಲ್ಲಿ ಸೇನಾಪಡೆಯನ್ನು ನಿಷ್ಕ್ರಿಯಗೊಳಿಸುವಿಕೆ ಮತ್ತು ಉದ್ವಿಗ್ನ ಪರಿಸ್ಥಿತಿಯನ್ನು ತಗ್ಗಿಸುವ ಪ್ರಕ್ರಿಯೆಯನ್ನು ಉಭಯ ದೇಶಗಳು ಮಾಡುತ್ತಿದ್ದು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.

ಗಡಿ ವಾಸ್ತವ ರೇಖೆಯಲ್ಲಿ ಎರಡೂ ಕಡೆಯ ಸೇನಾಪಡೆಗಳು ಬಹಳ ಹತ್ತಿರದಲ್ಲಿರುವುದರಿಂದ ಅವುಗಳನ್ನು ಹಿಂತೆಗೆದುಕೊಳ್ಳಲು ನಾವು ಮಾತುಕತೆ ನಡೆಸುತ್ತಿದ್ದು, ಅದಕ್ಕೆ ಚೀನಾ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಇಂಡಿಯಾ ಗ್ಲೋಬಲ್ ವೀಕ್ ಸಂವಾದದಲ್ಲಿ ಹೇಳಿದರು.

ಮಾತುಕತೆ ಆರಂಭವಾಗಿ ಸೇನಾಪಡೆಯನ್ನು ಹಿಂತೆಗೆದುಕೊಳ್ಳುವ ಕಾರ್ಯ ಆರಂಭವಾಗಿದೆಯಷ್ಟೆ. ಕೆಲಸ ಪ್ರಗತಿಯಲ್ಲಿದೆ. ಈ ಸಂದರ್ಭದಲ್ಲಿ ನಾನು ಹೆಚ್ಚಿಗೆ ಏನೂ ಹೇಳಲು ಬಯಸುವುದಿಲ್ಲ ಎಂದಿದ್ದಾರೆ.

ಯುದ್ಧ, ಘರ್ಷಣೆ ಮಾಡದೆ ಶಾಂತಿ, ಭಾತೃತ್ವ ಕಾಪಾಡುವ ನಿಟ್ಟಿನಲ್ಲಿ ಗಡಿಯಲ್ಲಿ ಸಂಪೂರ್ಣ ಶಾಂತಿ ನೆಲೆಸಲು ಪೂರ್ವ ಲಡಾಕ್ ನಲ್ಲಿ ಸೇನಾಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಬಗ್ಗೆ ಭಾರತ ಮತ್ತು ಚೀನಾ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿವೆ. ಇದಾದ ಬಳಿಕ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.

SCROLL FOR NEXT