ದೇಶ

ನಾಳೆಯಿಂದ 'ರಾಹುಲ್ ಗಾಂಧಿ ಮನ್ ಕಿ ಬಾತ್'

Srinivasamurthy VN

ನವದೆಹಲಿ: ಕೊರೋನಾ  ನಿರ್ವಹಣೆ ಮತ್ತು ಲಡಾಖ್ ಸಂಘರ್ಷದ ವಿಚಾರವಾಗಿ ವಿಚಾರವಾಗಿ ಕೇಂದ್ರ ಸರ್ಕಾರವನ್ನು ನಿರತಂರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಳೆಯಿಂದ ತಮ್ಮದೇ ಆದ ಮನ್ ಕಿ ಬಾತ್ ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ರಾಹುಲ್ ಗಾಂಧಿ ಅವರು, 'ಸುಳ್ಳಿನ ನಿರೂಪಣೆ ಭಾರತವನ್ನು ಛಿದ್ರಮಾಡುತ್ತಿದೆ. ಅಂತಹ ಅನೇಕ ವರದಿಗಳ ಸತ್ಯವನ್ನು ನಾನು ಹೊರತರುತ್ತೇನೆ. ಪ್ರಚಲಿತ ವಿದ್ಯಮಾನ, ಇತಿಹಾಸ ಮತ್ತು ಬಿಕ್ಕಟ್ಟು ಪರಿಹಾರದ ಕುರಿತು ಮಾತನಾಡುತ್ತೇನೆ. ಸತ್ಯದ ಬಗ್ಗೆ ತಿಳಿಯಲು ಆಸಕ್ತಿ ಇರುವವರು ಇದನ್ನು ಕೇಳಬಯಸುತ್ತೇನೆ. ನಾಳೆಯಿಂದ, ನಾನು ನನ್ನ ಆಲೋಚನೆಗಳನ್ನು ನಿಮ್ಮೊಂದಿಗೆ ವೀಡಿಯೊದಲ್ಲಿ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಅಂತೆಯೇ 'ಇಂದು ಭಾರತದ ಸುದ್ದಿ ಮಾಧ್ಯಮಗಳ ಬಹುಪಾಲು ಭಾಗವನ್ನು ಫ್ಯಾಸಿಸ್ಟ್ ಹಿತಾಸಕ್ತಿಗಳು ಅಕ್ರಮಿಸಿಕೊಂಡಿವೆ. ಟಿವಿ ಚಾನೆಲ್‌ಗಳು, ವಾಟ್ಸಾಪ್ ಫಾರ್ವರ್ಡ್ಗಳು ಸುಳ್ಳು ಸುದ್ದಿಗಳಿಂದ ಮತ್ತು ದ್ವೇಷದಿಂದ ತುಂಬಿದ ನಿರೂಪಣೆಗಳನ್ನು ಹರಡುತ್ತಿದೆ. ಇಂತಹ ಸುಳ್ಳುಗಳ ನಿರೂಪಣೆಯೇ ಇಂದು ದೇಶವನ್ನು ಛಿದ್ರ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನು ರಾಹುಲ್ ಗಾಂಧಿ ಟೆಲಿಗ್ರಾಮ್ ನಲ್ಲೂ ಕೂಡ ತಮ್ಮ ಖಾತೆ ತೆರೆದಿದ್ದಾರೆ.  

SCROLL FOR NEXT