ದೇಶ

ಶಮನವಾಗಿಲ್ಲ ಭಿನ್ನಮತ: ಇಂದಿನ ಕಾಂಗ್ರೆಸ್ ಶಾಸಕರ ಸಭೆಗೂ ಸಚಿನ್ ಪೈಲಟ್ ಗೈರು!

Sumana Upadhyaya

ಜೈಪುರ: ರಾಜಸ್ತಾನ ಕಾಂಗ್ರೆಸ್ ವಲಯದಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನವಾದಂತೆ ಕಾಣುತ್ತಿಲ್ಲ. ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೂಡ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಭಾಗವಹಿಸಲಿಲ್ಲ.

ಸಚಿನ್ ಪೈಲಟ್ ಅವರಿಗೆ ಕಾಂಗ್ರೆಸ್ ಬಾಗಿಲು ಯಾವಾಗಲೂ ಮುಕ್ತವಾಗಿರುತ್ತದೆ, ಅವರು ವಾಪಾಸ್ ಬರಬೇಕು, ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ನಿನ್ನೆಯ ಸಭೆಯ ಬಳಿಕ ಕಾಂಗ್ರೆಸ್ ನಾಯಕರು ಹೇಳಿದ್ದರು. ಇಂದು ಬೆಳಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ನಿವಾಸದಲ್ಲಿ ಸಭೆ ಆರಂಭಕ್ಕೆ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮತ್ತೊಮ್ಮೆ ಸಚಿವ್ ಪೈಲಟ್ ಅವರಿಗೆ ಮನವಿ ಕಳುಹಿಸಿದ್ದರು.

ಆದರೆ ಇಂದಿನ ಸಭೆಗೆ ಸಚಿನ್ ಪೈಲಟ್ ಜೊತೆಗೆ ಉಳಿದ 18 ಕಾಂಗ್ರೆಸ್ ಶಾಸಕರು ಇಂದಿನ ಸಿಎಲ್ ಪಿ ಸಭೆಗೆ ಹಾಜರಾಗಲಿಲ್ಲ. ಆದರೆ ಸ್ವತಂತ್ರ ಶಾಸಕರು ಇಂದಿನ ಸಭೆಗೆ ಹಾಜರಾಗಿ ಸಿಎಂ ಗೆಹ್ಲೊಟ್ ಗೆ ಬೆಂಬಲ ಸೂಚಿಸಿದ್ದಾರೆ.

ರಾಜಸ್ತಾನ ಕಾಂಗ್ರೆಸ್ ಉಸ್ತುವಾರಿಯಾಗಿರುವ ಸಚಿನ್ ಪೈಲಟ್ ಗೆ ಇಂದಿನ ಸಭೆಗೆ ಹಾಜರಾಗಲು ಎರಡನೇ ಅವಕಾಶವಾಗಿತ್ತು. ಆದರೆ ಅವರು ಮತ್ತು ಅವರ ನಿಕಟವರ್ತಿ ಶಾಸಕರು ಸಭೆಗೆ ಹಾಜರಾಗುವ ಮನಸ್ಸು ತೋರಲಿಲ್ಲ.

SCROLL FOR NEXT