ದೇಶ

1,048 ಮಂದಿ ಮೇಲೆ 'ಔಷಧಿ ಪ್ರಯೋಗ' ನಡೆಸಿದ ಝೈಡಸ್ ಕ್ಯಾಡಿಲಾ

Srinivasamurthy VN

ನವದೆಹಲಿ: 213 ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಔಷಧಿ ಕಂಡು ಹಿಡಿಯುವ ಪ್ರಕ್ರಿಯೆ ಭಾರತದಲ್ಲಿ ನಿರ್ಣಾಯಕ ಹಂತ ತಲುಪಿದ್ದು, ಕೊರೋನಾ ಸೋಂಕಿತರ ಮೇಲೆ ಔಷಧಿ ಪ್ರಯೋಗ ಆರಂಭಿಸಿರುವುದಾಗಿ ಝೈಡಸ್ ಕ್ಯಾಡಿಲಾ ಸಂಸ್ಥೆ ಘೋಷಿಸಿದೆ.

ಕೊರೊನಾ ಸೋಂಕಿಗೆ ಝೋಕೊವ್-ಡಿ ಎಂಬ ಔಷಧಿ ಕಂಡು ಹಿಡಿದಿದ್ದು, ಸೋಂಕಿತರ ಮೇಲೆ ಔಷಧಿ ಪ್ರಯೋಗ ಆರಂಭಿಸಲಾಗಿದೆ ಎಂದು ಝೈಡಸ್ ಕ್ಯಾಡಿಲಾ ಸಂಸ್ಥೆ ಹೇಳಿಕೊಂಡಿದೆ. ಕೊರೊನಾ ಪೀಡಿತರ ಮೇಲೆ ಔಷಧಿ ಪ್ರಯೋಗದ ಅನುಮತಿ ಪಡೆದಿರುವ ಈ ಸಂಸ್ಥೆ, ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿಗೆ ಮದ್ದು ಕಂಡುಹಿಡಿಯುವ ವಿಶ್ವಾಸದಲ್ಲಿದೆ. ಸೋಂಕಿತರ ಮೇಲಿನ ಮೊದಲ ಹಾಗೂ ಎರಡನೇ ಹಂತದ ಪ್ರಯೋಗ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಔಷಧಿ ಈ ನಿಟ್ಟಿನಲ್ಲಿ ಯಶ ಸಾಧಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆಯ ಮೂಲಗಳು ತಿಳಿಸಿರುವಂತೆ ದೇಶದಲ್ಲಿ ಝೈಡಸ್ ಕ್ಯಾಡಿಲಾ ಸಂಸ್ಥೆ, ಕೊರೋನಾ ಔಷಧದ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ನಡೆಸಲಾಗುತ್ತಿದೆ. ಇದಕ್ಕಾಗಿ ದೇಶದಲ್ಲಿ 1,048 ಸ್ವಯಂ ಕಾರ್ಯಕರ್ತರ ಮೇಲೆ 'ಔಷಧಿ ಪ್ರಯೋಗ' ನಡೆಸಲಾಗಿದೆ. ಈ ಪ್ರಯೋಗ ನಡೆಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತಿಂಗಳ ಹಿಂದೆಯೇ ಅನುಮತಿ ನೀಡಿತ್ತು. 

ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ- ಇಂಡಿಯಾ (ಸಿಟಿಆರ್ ಐ) ಇನ್ ಕ್ಲೂಷನ್ ಮತ್ತು ಎಕ್ಸ್ ಕ್ಲೂಷನ್ ಎಂಬ 2 ಹಂತದಲ್ಲಿ ನಡೆಯಲಿದೆ ಎಂದು ಹೇಳಿದೆ.

SCROLL FOR NEXT