ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಇತ್ತೀಚಿನ ಹ್ಯಾಕ್ ನಂತರ ಟ್ವಿಟರ್ ಗೆ ನೋಟಿಸ್ ನೀಡಿದ ಭಾರತ ಸರ್ಕಾರ

ಉನ್ನತ ಪ್ರೊಫೈಲ್ ನ್ನು ಗುರಿಯಾಗಿಸಿಕೊಂಡು ಇತ್ತೀಚಿಗೆ ಆದ ಜಾಗತಿಕ ಹ್ಯಾಕ್ ನ ಪೂರ್ಣ ಮಾಹಿತಿ ನೀಡುವಂತೆ ಸೂಚಿಸಿ ಭಾರತದ ಸೈಬರ್ ಸೆಕ್ಯೂರಿಟಿ ನೋಡಲ್ ಏಜೆನ್ಸಿ ಸಿಇಆರ್ ಟಿ, ಟ್ವಿಟರ್ ಗೆ ನೋಟಿಸ್ ನೀಡಿದೆ.

ಟ್ವಿಟರ್ ಚಿತ್ರ
Nagaraja AB
Updated On : 18 Jul 2020, 3:52 pm

ನವದೆಹಲಿ: ಉನ್ನತ ಪ್ರೊಫೈಲ್ ನ್ನು ಗುರಿಯಾಗಿಸಿಕೊಂಡು ಇತ್ತೀಚಿಗೆ ಆದ ಜಾಗತಿಕ ಹ್ಯಾಕ್ ನ ಪೂರ್ಣ ಮಾಹಿತಿ ನೀಡುವಂತೆ ಸೂಚಿಸಿ ಭಾರತದ ಸೈಬರ್ ಸೆಕ್ಯೂರಿಟಿ ನೋಡಲ್ ಏಜೆನ್ಸಿ ಸಿಇಆರ್ ಟಿ, ಟ್ವಿಟರ್ ಗೆ ನೋಟಿಸ್ ನೀಡಿದೆ.

ಜಾಗತಿಕ ಹ್ಯಾಕ್ ನಿಂದಾಗಿ ಅಪಾರ ಸಂಖ್ಯೆಯ ಭಾರತೀಯ ಬಳಕೆದಾರರು ಹಾಗೂ ಅವರ ಡಾಟಾ ಮೇಲೆ ಪರಿಣಾಮ ಬೀರಿದ್ದು, ಅದರ ಸಂಪೂರ್ಣ ಮಾಹಿತಿ ನೀಡುವಂತೆ  ಕೇಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ದುರುದ್ದೇಶಪೂರಿತ ಟ್ವೀಟ್‌ಗಳು ಮತ್ತು ಲಿಂಕ್‌ಗಳಿಗೆ ಭೇಟಿ ನೀಡಿದ ಭಾರತದ ಬಳಕೆದಾರರ ಸಂಖ್ಯೆ ಮತ್ತು ಒಂದು ವೇಳೆ ಪರಿಣಾಮ
ಬೀರಬಹುದಾದ ಬಳಕೆದಾರರ ಟ್ವಿಟರ್ ಖಾತೆ ಬಗ್ಗೆ  ಮಾಹಿತಿ ನೀಡಲಾಗಿತ್ತೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆಯೂ ಸಿಇಆರ್ ಟಿಟ್ವಿಟರ್ ಸಂಸ್ಥೆಯನ್ನು ಕೇಳಿದೆ ಎಂದು ತಿಳಿದುಬಂದಿದೆ.

Advertisement

Advertisement

ದಾಳಿಕೋರರ ಕಾರ್ಯವಿಧಾನ ಹಾಗೂ ಹ್ಯಾಕಿಂಗ್ ನಿಂದ ಆದ ಪರಿಣಾಮದ ಬಗ್ಗೆ ಕೈಗೊಂಡ ಕಾನೂನು ಕ್ರಮದ ಬಗ್ಗೆ ಸಂಪೂರ್ಣ
ಮಾಹಿತಿ ನೀಡುವಂತೆ ಸರ್ಕಾರ ಟ್ವೀಟರ್ ಸಂಸ್ಥೆಯನ್ನು ಒತ್ತಾಯಿಸಿದೆ. ಆದರೆ, ಟ್ವಿಟರ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement