ದೇಶ

ಮೋದಿ ಅಯೋಧ್ಯೆ ಭೇಟಿ: ಮಂದಿರ ಕಟ್ಟಿದರೆ ಕೊರೋನಾ ನಿರ್ಮೂಲನೆಯಾಗುತ್ತೆಂದು ಕೆಲವರು ಭಾವಿಸಿದ್ದಾರೆ- ಶರದ್ ಪವಾರ್ ಲೇವಡಿ

Vishwanath S

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದರೆ ದೇಶದಲ್ಲಿ ಕೊರೋನಾ ನಿರ್ಮೂಲನೆಯಾಗುತ್ತದೆಯೆಂದು ಕೆಲವರು ಭಾವಿಸಿದ್ದಾರೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಲೇವಡಿ ಮಾಡಿದ್ದಾರೆ. 

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿನ್ನೆ ಆಗಸ್ಟ್ 3 ಅಥವಾ 5ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಬಹುದು ಎಂದು ಹೇಳಿದ ಬೆನ್ನಲ್ಲೇ ಶರದ್ ಪವಾರ್ ಈ ಹೇಳಿಕೆ ನೀಡಿದ್ದಾರೆ. ಟ್ರಸ್ಟ್ ರಾಮಮಂದಿರದ ಶಂಕುಸ್ಥಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದೆ. 

ರಾಮಮಂದಿರ ನಿರ್ಮಾಣದ ಕುರಿತಾಗಿ ಮಿತ್ರ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿಕೆ ನೀಡಿದ ಬೆನ್ನಲ್ಲೇ ಶಿವಸೇನೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದೆ. ಶ್ರೀರಾಮ ನಮ್ಮ ಪಕ್ಷದ ನಂಬಿಕೆಯ ವಿಷಯ. ಇದನ್ನು ಯಾವುದೇ ಕಾರಣಕ್ಕೂ ರಾಜಕೀಯಗೊಳಿಸಲು ಇಚ್ಛಿಸುವುದಿಲ್ಲ. ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹಾರಾಷ್ಟ್ರ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ದಕ್ಷಿಣ ಮುಂಬೈನ ಶಿವಸೇನಾ ಸಂಸದ ಅರವಿಂದ್ ಸಾವಂತ್ ಹೇಳಿದ್ದಾರೆ.

SCROLL FOR NEXT