ದೇಶ

ಪ್ಯಾಕೇಜ್ ವಸ್ತುಗಳನ್ನು ಎಂಆರ್ಪಿಗಿಂತ ಹೆಚ್ಚಿನ ಬೆಲೆಗೆ ಮಾರಿದರೆ ಕಠಿಣ ಕ್ರಮ

Srinivas Rao BV

ನವದೆಹಲಿ: ಪ್ಯಾಕೇಜ್ ಮಾಡಿದ ವಸ್ತುಗಳನ್ನು ಗರಿಷ್ಠ ಚಿಲ್ಲರೆ ಬೆಲೆಗಿಂತ (ಎಂಆರ್ಪಿ) ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಎಚ್ಚರಿಸಿದೆ. 

ಇಂತಹ ಮೊದಲ ಅಪರಾದಕ್ಕೆ 5,000 ರಿಂದ 15,000 ರೂಪಾಯಿ ದಂಡ ಮತ್ತು ಪುನರಾವರ್ತಿತ ಅಪರಾಧಕ್ಕೆ 1 ಲಕ್ಷ ರೂಪಾಯಿ .ಗಳವರೆಗೆ ದಂಡ ವಿಧಿಸಲಾಗುವುದು ಎಂದೂ ಸಚಿವಾಲಯ ತಿಳಿಸಿದೆ.

ಇದೇ ವೇಳೆ ಕಾನೂನು ಮಾಪನಶಾಸ್ತ್ರ ಕಾಯ್ದೆಯ ಅಡಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಇದೇ ವೇಳೆ ಪುನರಾವರ್ತಿತ ಅಪರಾಧಗಳಿಗೆ 10 ಲಕ್ಷ ರೂ.ಗಳ ದಂಡವನ್ನು, ಹಾಗೂ ಕೆಲವು ಸಂದರ್ಭಗಳಲ್ಲಿ ಪರವಾನಗಿಗಳನ್ನು ರದ್ದುಗೊಳಿಸುವ ನಿಬಂಧನೆಗಳನ್ನು ಮಾಡಲಾಗಿದೆ. 

ಪ್ಯಾಕೇಜ್ ಮಾಡಿದ ನೀರು ಮತ್ತು ಆಹಾರ ಉತ್ಪನ್ನಗಳು ಮತ್ತು ಇತರ ಎಲ್ಲ ಗ್ರಾಹಕ ಬಾಳಿಕೆ ಬರುವ, ಎಂಆರ್ಪಿ ಮೂಲಕ ಮಾರಾಟ ಮಾಡುವ ವಸ್ತುಗಳಿಗೆ ದಂಡ ವಿಧಿಸುವುದು ಅನ್ವಯವಾಗಲಿದೆ. 

ಪ್ರಸ್ತುತ, ಪ್ಯಾಕೇಜ್ ಮಾಡಲಾದ ಸರಕುಗಳ ನಿಯಮಗಳ ಅಡಿಯಲ್ಲಿ ಅತಿಯಾದ ಬೆಲೆಗೆ ಮಾರಾಟ ಮಾಡಿದರೆ 5,000 ರೂ.ವರೆಗೆ ದಂಡ ವಿಧಿಸಬಹುದು.ಪ್ರಸ್ತುತ ಕಾನೂನಿನಲ್ಲಿ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

SCROLL FOR NEXT