ದೇಶ

ಸಚಿನ್ ಪೈಲಟ್ 'ನಿಷ್ಪ್ರಯೋಜಕ' ಅಂತ ಗೊತ್ತಿತ್ತು, ಆದರೆ ಪಕ್ಷದ ಹಿತಕ್ಕಾಗಿ ಸುಮ್ಮನಿದ್ದೆ: ಗೆಹ್ಲೋಟ್

Lingaraj Badiger

ಜೈಪುರ: ಕಾಂಗ್ರೆಸ್ ಬಂಡಾಯ ನಾಯಕ ರಾಜಸ್ಥಾನ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಒಬ್ಬ 'ನಿಷ್ಪ್ರಯೋಜಕ' ಏನನ್ನು ಮಾಡುತ್ತಿರಲಿಲ್ಲ. ಆದರೆ ಪಕ್ಷದ ಹಿತದೃಷ್ಟಿಯಿಂದ ನಾನು ಅವರನ್ನು ಪ್ರಶ್ನೆ ಮಾಡಲಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸೋಮವಾರ ಹೇಳಿದ್ದಾರೆ.

ಸುಮಾರು ಏಳು ವರ್ಷಗಳ ಕಾಲ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ಸಚಿನ್ ಪೈಲಟ್ ಅವರನ್ನು ಬದಲಾಯಿಸಬೇಕು ಎಂಬ ಯಾವುದೇ ಬೇಡಿಕೆ ಇರಲಿಲ್ಲ ಎಂದು ಸಿಎಂ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ.

ಅವರು ತಮ್ಮ ಸರ್ಕಾರವನ್ನು ಉರುಳಿಸುವ ಪಿತೂರಿಯ ಬಗ್ಗೆ ಮಾತನಾಡುತ್ತಿದ್ದರು. ಆದರೆ ಇದನ್ನು ಯಾರೂ ನಂಬುತ್ತಿರಲಿಲ್ಲ. ಏಕೆಂದರೆ ಅವರ(ಪೈಲಟ್) ಮುಗ್ಧ ಮುಖ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಮೇಲಿನ ಹಿಡಿತ ಮತ್ತು ದೇಶಾದ್ಯಂತ ಮಾಧ್ಯಮಗಳ ಮೇಲೆ ಪ್ರಭಾವ ಹೊಂದಿದ್ದಾರೆ ಎಂದು ಗೆಹ್ಲೋಟ್, ತಮ್ಮ ವಿರುದ್ಧ ಬಂಡಾಯವೆದ್ದಿರುವ ಸಚಿನ್ ಪೈಲಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಏಳು ವರ್ಷಗಳ ಕಾಲ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ಬದಲಾಯಿಸಲು ಯಾವುದೇ ಬೇಡಿಕೆ ಇಲ್ಲದ ಏಕೈಕ ರಾಜ್ಯ ರಾಜಸ್ಥಾನ. ಇಲ್ಲಿ ಏನೂ ನಡೆಯುತ್ತಿಲ್ಲ ಎಂದು ನಮಗೆ ತಿಳಿದಿತ್ತು. ಅವರು ನಿಷ್ಪ್ರಯೋಜಕ ಮತ್ತು ಉತ್ಸವಮೂರ್ತಿ ಅಷ್ಟೇ ಎಂದು ನಮಗೆ ತಿಳಿದಿತ್ತು. ಆದರೂ ನಾವು ಪಕ್ಷದ ಹಿತದೃಷ್ಟಿಯಿಂದ ಸುಮ್ಮನಿದ್ದೆವು ಎಂದು ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

SCROLL FOR NEXT