'ಮುಖ್ಯಮಂತ್ರಿ ಘರ್ ಘರ್ ರೇಷನ್ ಯೋಜನೆ'ಗೆ ದೆಹಲಿ ಸಂಪುಟ ಅನುಮೋದನೆ; ಸಿಎಂ ಕೇಜ್ರೀವಾಲ್
ದೆಹಲಿಯಲ್ಲಿ ಫಲಾನುಭವಿಗಳ ಮನೆಗಳಿಗೆ ಪಡಿತರ ಪೂರೈಸುವ "ಮುಖ್ಯಮಂತ್ರಿ ಘರ್ ಘರ್ ರೇಷನ್ ಯೋಜನೆ"ಗೆ ಸರ್ಕಾರ ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಘೋಷಿಸಿದ್ದಾರೆ.
ನವದೆಹಲಿ: ದೆಹಲಿಯಲ್ಲಿ ಫಲಾನುಭವಿಗಳ ಮನೆಗಳಿಗೆ ಪಡಿತರ ಪೂರೈಸುವ "ಮುಖ್ಯಮಂತ್ರಿ ಘರ್ ಘರ್ ರೇಷನ್ ಯೋಜನೆ"ಗೆ ಸರ್ಕಾರ ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಘೋಷಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಯನ್ನು ಘೋಷಿಸಿದ ಅವರು, ಕೋವಿಡ್ ಸಂದರ್ಭದಲ್ಲಿ ಪ್ರತಿನಿತ್ಯ ದುಃಖದ ವಿಷಯಗಳೇ ಕೇಳಲು ಸಿಗುತ್ತಿದೆ. ಆದರೆ, ಇಂದು ಜನರಿಗೆ ಸಂತಸದ ವಿಷಯವಿದೆ. ಪ್ರತಿ ರಾಜ್ಯ ಸರ್ಕಾರಗಳು ಕೂಡ ಕೇಂದ್ರ ಸರ್ಕಾರದ ನೆರವಿನಿಂದ ಬಡ ಜನರಿಗೆ ರೇಷನ್ ವಿತರಿಸುತ್ತಿದೆ. ಆದರೆ, ಬಡಜನರು ಪಡಿತರ ಪಡೆಯಲು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಒಮ್ಮೆ ಅಂಗಡಿಗಳು ತೆರೆದಿರದಿದ್ದರೆ, ಇನ್ನೊಮ್ಮೆ ಜನರು ಉದ್ದದ ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ಕೆಲವೊಮ್ಮೆ ಪಡಿತರ ದಾಸ್ತಾನು ಇರುವುದಿಲ್ಲ, ಸರಿಯಾದ ತೂಕ ಮಾಡುವುದಿಲ್ಲ ಎಂದು ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ಈ ಎಲ್ಲಾ ಸಮಸ್ಯೆಗಳಪರಿಹಾರಕ್ಕೆ ದೆಹಲಿಯ ಎಎಪಿ ಸರ್ಕಾರ ಜನ ಮನೆ ಬಾಗಿಲಿಗೆ ಪಡಿತರ ವಿತರಿಸಲು ಮುಂದಾಗಿದೆ ಎಂದು ಹೇಳಿದರು.