ದೇಶ

ದೇಶದಲ್ಲೇ ಮೊದಲು! ಗುಜರಾತ್ ಪೋಲೀಸರಿಗೆ ಸಾಮಾಜಿಕ ಮಾಧ್ಯಮ ನೀತಿ ಸಂಹಿತೆ  ಜಾರಿ

Raghavendra Adiga

ಅಹಮದಾಬದ್: ಡಿಜಿಪಿ ಶಿವಾನಂದ್ ಝಾ ಹೊರಡಿಸಿದ ಆದೇಶದನ್ವಯ  ಗುಜರಾತ್‌ನ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಯಾರೂ ಸಾಮಾಜಿಕ ತಾಣದಲ್ಲಿ ತಮ್ಮ ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು ಅಥವಾಯಾವುದೇ ಸರ್ಕಾರಿ ವಿರೋಧಿ  ಬರಹ ಪ್ರಕಟಿಸಬಾರದು ಎಂದು ನಿರ್ದೇಶಿಸಲಾಗಿದೆ. ಇದು ದೇಶದ ಮೋಟ್ಟ ಮೊದಲ ಸಾಮಾಜಿಕ ತಾಣಗಳ ಮೇಲಿನ ನೀತಿ ಸಂಹಿತೆ ಎಂದು ಹೇಳಲಾಗಿದೆ.

ರಾಜ್ಯದ ಪೊಲೀಸ್ ಸಿಬ್ಬಂದಿಯ ವೇತನ ಹೆಚ್ಚಳಕ್ಕಾಗಿ ಆನ್‌ಲೈನ್ ಅಭಿಯಾನ ಪ್ರಾರಂಬವಾದ ನಂತರ  ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಇದು ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ವೇದಿಕೆಗಳಲ್ಲಿ ಭಾರಿ ಪ್ರತಿಕ್ರಿಯೆಗಳನ್ನು ಪಡೆದಿದೆ.

ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ವಿಷಯಗಳನ್ನು ಮುದ್ರಿಸಲು ಅಥವಾ ಪ್ರಕಟಿಸಲು ನಿಷೇಧಿಸಲಾಗಿದ್ದರೂ, ಸಾಮಾಜಿಕ ಮಾಧ್ಯಮಗಳ ಬಳಕೆಗೆ ಸಂಬಂಧಿಸಿದಂತೆ ಇಂತಹ ವಿವರವಾದ ನೀತಿ ಸಂಹಿತೆಯನ್ನು ಅವರಿಗೆ ನೀಡಲಾಗುತ್ತಿರುವುದು ಇದೇ ಮೊದಲು. ಏತನ್ಮಧ್ಯೆ, ವೇತನ ಹೆಚ್ಚಳಕ್ಕಾಗಿ "ಹಿಂಸಾತ್ಮಕ ಆಂದೋಲನದಲ್ಲಿ" ಪಾಲ್ಗೊಳ್ಳುವಂತೆ ಪೊಲೀಸ್ ಸಿಬ್ಬಂದಿಯನ್ನು ತಪ್ಪುದಾರಿಗೆ ಎಳೆದಿದ್ದಕ್ಕಾಗಿ ಗಾಂಧಿನಗರದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಡಿಜಿಪಿ ಝಾ ಹೇಳಿದ್ದಾರೆ.

ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ರಾಜ್ಯ ಮತ್ತು ಪೊಲೀಸ್ ಪಡೆ ಭಾಗಿಯಾಗಿರುವ ಸಮಯದಲ್ಲಿ ಪೊಲೀಸರನ್ನು ದಾರಿ ತಪ್ಪಿಸಿದ್ದಕ್ಕಾಗಿ ಮೂವರನ್ನು ಬಂಧಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಕಮಲೇಶ್ ಸೋಲಂಕಿ, ಭೋಜಭಾಯಿ ಭರ್ವಾಡ್ ಮತ್ತು ಹಸ್ಮುಖ್ ಸಕ್ಸೇನಾ ಎಂಬ ಮೂವರನ್ನು ವಿಚಾರಣೆಯ ನಂತರ ಬಂಧಿಸಲಾಗುವುದು ಎಂದು ಉನ್ನತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.  ಇಂತಹ ಆನ್‌ಲೈನ್ ಅಭಿಯಾನದ ಹಿಂದಿನ ಜನರನ್ನು ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆಇಂತಹ ಅಭಿಯಾನಗಳಲ್ಲಿ ಭಾಗವಹಿಸುವ ಪೊಲೀಸ್ ಸಿಬ್ಬಂದಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಡಿಜಿಪಿ ಹೇಳಿದರು.

ಹೊಸ ಮಾನದಂಡಗಳ ಪ್ರಕಾರ, ಪೊಲೀಸರು ಮತ್ತು ಅಧಿಕಾರಿಗಳು ಯಾವುದೇ ರಾಜಕೀಯ ಹೇಳಿಕೆಗಳನ್ನು ಅಥವಾ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಬಾರದು. ಅವರು ಧರ್ಮ, ಜಾತಿ, ಮತ ಅಥವಾ ಉಪಜಾತಿಯ ಕಾರಣಕ್ಕಾಗಿ ಉತ್ತೇಜಿಸುವ ಅಥವಾ ಆಂದೋಲನ ಮಾಡುವ ಉದ್ದೇಶದಿಂದ ರೂಪುಗೊಂಡ ಯಾವುದೇ ಗುಂಪುಗಳು ಅಥವಾ ವೇದಿಕೆಗಳ ಭಾಗವಾಗಿರಬಾರದು. 

ಆದರೆ ಗುಪ್ತಚರ ಅಧಿಕಾರಿಗಳಿಗೆ ತಮ್ಮ ಹಿರಿಯ ಅಧಿಕಾರಿಗಳ ಪೂರ್ವಾನುಮತಿ ಪಡೆದಿದ್ದಾದರೆ ಇದರಿಂಡ ವಿನಾಯಿತಿ ಇದೆ.

ಯಾವುದೇ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಅಥವಾ ಪೊಲೀಸ್ ಪಡೆಗಳನ್ನು ಟೀಕಿಸುವ ಯಾವುದೇ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಬಾರದು ಎಂದು ನೀತಿ ಸಂಹಿತೆ ತಿಳಿಸಿದೆ. ಅಂತೆಯೇ, ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ದೂರನ್ನು ಆನ್‌ಲೈನ್‌ನಲ್ಲಿ ನೀಡುವಂತಿಲ್ಲ. ಪೊಲೀಸ್ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಇದು ನಿರ್ಬಂಧಿಸಿದೆ.

ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಅಥವಾ ನಡೆಯುತ್ತಿರುವ ತನಿಖೆ ಅಥವಾ ಭವಿಷ್ಯದ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿಬಹಿರಂಗಪಡಿಸದಂತೆ ಪೊಲೀಸರಿಗೆ ಸೂಚಿಸಲಾಗಿದೆ.  ಸೋಶಿಯಲ್ ಮೀಡಿಯಾದಲ್ಲಿ ಸೇರಲು ಇಂಟರ್‌ನೆಟ್‌ನಂತಹ ಸರ್ಕಾರಿ ಸಂಪನ್ಮೂಲಗಳನ್ನು ಬಳಸದಂತೆ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗಿದೆ. ಕರ್ತವ್ಯದಲ್ಲಿರುವಾಗ ಅವರು ಸಾಮಾಜಿಕ ಮಾಧ್ಯಮವನ್ನು ಬಳಸುವಂತಿಲ್ಲ. 

ಒಬ್ಬ ಪೊಲೀಸ್ ಸೋಶಿಯಲ್ ಮೀಡಿಯಾವನ್ನು ಖಾಸಗಿ ಉದ್ದೇಶಕ್ಕಾಗಿ ಬಳಸುತ್ತಿದ್ದರೆ, ಅವನು ಹಾಗೆ ಮಾಡುತ್ತಿರುವುದು ತನ್ನ ವೈಯಕ್ತಿಕ ಹಾಗೂ  ಗುಜರಾತ್ ಪೊಲೀಸ್ ಇಲಾಖೆಯ ಸಿಬ್ಬಂದಿಯಾಗಿ ಅಲ್ಲವೆಂದು  ಸ್ಪಷ್ಟಪಡಿಸಬೇಕೆಂದು ನೀತಿ ಸಂಹಿತೆ ಹೇಳಿದೆ. 

SCROLL FOR NEXT