ದೇಶ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದ 370ನೇ ವಿಧಿ ರದ್ದತಿ ಈಗ ಎನ್‌ಸಿಇಆರ್‌ಟಿ ಪಠ್ಯ

Raghavendra Adiga

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗಳನ್ನು ಕೇಂದ್ರಾಡಳಿತ ಪ್ರದೇಶವಾಗಿಸಿ ಇದುವರೆಗೆ ಆ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಉಪಕ್ರಮ ಇದೀಗ ಎನ್‌ಸಿಇಆರ್‌ಟಿ ಪಠ್ಯಕ್ರಮಕ್ಕೆ ಸೇರಿದೆ.  ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ರಾಜಕಾರಣದ ಬಗ್ಗೆ ಇದ್ದಂತಹಾ ಒಂದು ಪ್ಯಾರಾಗ್ರಾಫ್ ಪಾಠದ ಬದಲಿಗೆ ಕಳೆದ ವರ್ಷಕಾಶ್ಮೀರದ  ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಬಗ್ಗೆ ಸಂಕ್ಷಿಪ್ತ ಉಲ್ಲೇಖ ಸೇರ್ಪಡಿಸಿ ಎನ್‌ಸಿಇಆರ್‌ಟಿ ತನ್ನ 12 ನೇ ತರಗತಿಯ ರಾಜಕೀಯ ವಿಜ್ಞಾನ(ಪೊಲಿಟಿಕಲ್ ಸೈನ್ಸ್)  ಪಠ್ಯಪುಸ್ತಕದಲ್ಲಿ ಒಂದು ಅಧ್ಯಾಯವನ್ನು ಪರಿಷ್ಕರಿಸಿದೆ.

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) 2020-21ರ ಶೈಕ್ಷಣಿ ವರ್ಷಕ್ಕಾಗಿ  "ಸ್ವತಂತ್ರ ನಂತರದಲ್ಲಿ ಭಾರತದ ರಾಜಕೀಯ" ಎಂಬ ಪಠ್ಯಪುಸ್ತಕದಲ್ಲಿನ ಅಧ್ಯಾಯವನ್ನು ಪರಿಷ್ಕರಿಸಿದೆ. 

"ಪ್ರತ್ಯೇಕತಾವಾದ ಮತ್ತುಅದರಾಚಿನ ವಿಷಯವನ್ನು ಅಧ್ಯಾಯದಿಂದ ಕೈಬಿಟ್ಟಿದ್ದರೂ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಆರ್ಟಿಕಲ್ 370  ವಿಚಾರವನ್ನು "ಪ್ರಾದೇಶಿಕ ಆಕಾಂಕ್ಷೆ (ರೀಜನಲ್ ಆಸ್ಪಿರೇಷನ್ಸ್) " ಎಂಬ ವಿಷಯದ ಅಡಿಯಲ್ಲಿ ಸೇರಿಸಲಾಗಿದೆ. ಕಳೆದ ವರ್ಷ ಆಗಸ್ಟ್ 5 ರಂದು ಕೇಂದ್ರವು ಕಾಶ್ಮೀರದ  ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಗಳನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತ್ತು.

"ಭಾರತ ಮತ್ತು ಪಾಕಿಸ್ತಾನದಿಂದ ಸ್ವತಂತ್ರವಾದ ಪ್ರತ್ಯೇಕ ಕಾಶ್ಮೀರಿ ರಾಷ್ಟ್ರವನ್ನು ಬಯಸುವ ಪ್ರತ್ಯೇಕತಾವಾದಿಗಳ ಒಂದು ಗುಂಪು ಹಾಗೂ ಕಾಶ್ಮೀರ ಪಾಕಿಸ್ತಾನದೊಂದಿಗೆ ವಿಲೀನಗೊಳ್ಳಬೇಕೆಂದು ಬಯಸುವ ಇನ್ನೊಂದು ಗುಂಪು ಇದ್ದು ಇವುಗಳಲ್ಲದೆ, ಮೂರನೆಯ ಗುಂಪು ಕಾಶ್ಮೀರವನ್ನು  ಭಾರತೀಯ ಒಕ್ಕೂಟದೊಳಗೆ ಸೇರಿಸಲು ಬಯಸುತ್ತದೆ. ಅಲ್ಲದೆ ಇದರಿಂದ ರಾಜ್ಯದ ಜನರಿಗೆ ಹೆಚ್ಚಿನ ಸ್ವಾಯತ್ತತೆ ಸಿಗಲಿದೆ ಎಂದು ಆ ಗುಂಪು ಭಾವಿಸುತ್ತದೆ. " ಇದು ತೆಗೆದುಹಾಕಲಾಗಿರುವ ಪಠ್ಯದ ಭಾಗವಾಗಿದೆ.

ಪರಿಷ್ಕೃತ ಭಾಗವು, ಜಮ್ಮು ಮತ್ತು ಕಾಶ್ಮೀರದ ಬಗ್ಗೆ  "ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸಂವಿಧಾನದ 370 ನೇ ವಿಧಿ ಅನ್ವಯ ವಿಶೇಷ ಸ್ಥಾನಮಾನವಿತ್ತು. ಆದಾಗ್ಯೂ, ಅದರ ಹೊರತಾಗಿಯೂ, ಈ ಪ್ರದೇಶವು ಹಿಂಸಾಚಾರ, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ರಾಜಕೀಯ ಅಸ್ಥಿರತೆ ಸಾಕ್ಷಿಯಾಗಿತ್ತು. ಈ 370 ನೇ ವಿಧಿಮುಗ್ಧ ನಾಗರಿಕರು, ಭದ್ರತಾ ಸಿಬ್ಬಂದಿ ಮತ್ತು ಉಗ್ರರನ್ನು ಒಳಗೊಂಡಂತೆ ಅನೇಕ ಜೀವಗಳನ್ನು ಬಲಿಪಡೆದಿದೆ, . ಅಲ್ಲದೆ, ಕಾಶ್ಮೀರ ಕಣಿವೆಯಿಂದ ದೊಡ್ಡ ಪ್ರಮಾಣದಲ್ಲಿ ಕಾಶ್ಮೀರಿ ಪಂಡಿತರನ್ನು ಸ್ಥಳಾಂತರಿಸಲು ಕಾರಣವಾಗಿದೆ" ಎಂದಿದೆ.

"ಆಗಸ್ಟ್ 5, 2019 ರಂದು ಸಂವಿಧಾನದ 370 ನೇ ವಿಧಿ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ನಿರ್ಣಯವನ್ನು ಸಂಸತ್ತು ಅಂಗೀಕರಿಸಿತು. ರಾಜ್ಯವನ್ನು ಎರಡು ಕೇಂದ್ರ ಪ್ರದೇಶಗಳಾಗಿ ವಿಂಗಡಿಸಲಾಗಿದೆ - ಯಾವುದೇ ವಿಧಾನಸಭೆಯಿಲ್ಲದ ಲಡಾಖ್ ಕೇಂದ್ರಾಡಳಿತಕ್ಕೆ ಒಳಪಟ್ಟರೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಇದ್ದರೂ ಸಹ ಅದು ರಾಜ್ಯವಾಗಿರುವುದಿಲ್ಲ. "  ಪರಿಷ್ಕೃತ ಪಠ್ಯಪುಸ್ತಕವು 2002 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.
 

SCROLL FOR NEXT