ದೇಶ

45 ನೂತನ ರಾಜ್ಯಸಭಾ ಸದಸ್ಯರ ಪ್ರಮಾಣ: ಪ್ರತಿಜ್ಞಾ ವಿಧಿ ಬೋಧಿಸಿದ ಉಪ ರಾಷ್ಟ್ರಪತಿ

Lingaraj Badiger

ನವದೆಹಲಿ: ರಾಜ್ಯಸಭೆಗೆ ಹೊಸದಾಗಿ ಚುನಾಯಿತರಾದ 61 ಸದಸ್ಯರ 45 ಸದಸ್ಯರು ಬುಧವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ನೂತನ ಸದಸ್ಯರಿಗೆ ರಾಜ್ಯಸಭಾಧ್ಯಕ್ಷ, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಇಂದು ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಮುಖ್ಯವಾಗಿ ಮಲ್ಲಿಕಾರ್ಜುನ ಖರ್ಗೆ, ಕೆ ಸಿ ವೇಣುಗೋಪಾಲ್, ದೀಪೇಂದರ್ ಎಸ್ ಹೂಡಾ ಮತ್ತು ಕೆ ಟಿ ಎಸ್ ತುಳಸಿ ಮತ್ತಿತರರಿದ್ದು, 45 ಸದಸ್ಯರ ಪೈಕಿ 36 ಸದಸ್ಯರು ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.

ಕಲಾಪಕ್ಕೆ ಯಾವುದೇ ಅಡ್ಡಿಯಾಗದಂತೆ ನಡೆದುಕೊಳ್ಳಬೇಕು ಮತ್ತು ಸಂಸದರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಎತ್ತಿಹಿಡಿಯಬೇಕು ಎಂದು ನೂತನ ಸದಸ್ಯರಿಗೆ ವೆಂಕಯ್ಯ ನಾಯ್ಡು ಕಿವಿ ಮಾತು ಹೇಳಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸಂಸತ್ತಿನ ರಾಜ್ಯಸಭಾಧ್ಯಕ್ಷರ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಯಿತು.

SCROLL FOR NEXT