ದೇಶ

ವಕೀಲ ಪ್ರಶಾಂತ್ ಭೂಷಣ್, ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಗೆ ನ್ಯಾಯಾಂಗ ನಿಂದನೆ ನೊಟೀಸ್

Sumana Upadhyaya

ನವದೆಹಲಿ:ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಿಂದನಕಾರಿ ಟ್ವೀಟ್ ಮಾಡಿದ ಆರೋಪದ ಮೇಲೆ ನ್ಯಾಯಾಧೀಶ ಹಾಗೂ ಕಾರ್ಯಕರ್ತ ಪ್ರಶಾಂತ್ ಭೂಷಣ್ ಮತ್ತು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನೊಟೀಸ್ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠಕ್ಕೆ ಟ್ವಿಟ್ಟರ್ ಪರ ವಕೀಲರು ಹೇಳಿಕೆ ನೀಡಿ ನ್ಯಾಯಾಲಯ ಆದೇಶಿಸಿದರೆ ಪ್ರಶಾಂತ್ ಭೂಷಣ್ ಅವರ ಅವರು ಬರೆದಿದ್ದ ಅವಹೇಳನಕಾರಿ ಟ್ವೀಟ್ ಗಳನ್ನು ಅಳಿಸಿಹಾಕಲಾಗುವುದು ಎಂದಿದ್ದಾರೆ.
ಅಟಾರ್ನಿ ಜನರಲ್ ಅವರು ತನಿಖೆಯಲ್ಲಿ ಸಹಕಾರ ನೀಡಬೇಕೆಂದು ಕೋರಿದ ನ್ಯಾಯಾಲಯ ಆಗಸ್ಟ್ 5ಕ್ಕೆ ವಿಚಾರಣೆಯನ್ನು ಮುಂದೂಡಿತು.

ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಜೂನ್ 27 ಮತ್ತು ಜೂನ್ 29ರಂದು ಪೋಸ್ಟ್ ಮಾಡಿದ್ದ ಟ್ವೀಟ್ ಗೆ ಸಂಬಂಧಪಟ್ಟಂತೆ ತೀವ್ರ ಟೀಕೆ ಎದುರಿಸಿದ್ದರು.

ನ್ಯಾಯಾಲಯದಲ್ಲಿ ಟ್ವಿಟ್ಟರ್ ಇಂಡಿಯಾ ಬದಲಿಗೆ ಟ್ವಿಟ್ಟರ್ ಐಎನ್ ಸಿ ವಿಚಾರಣೆಯಲ್ಲಿ ಭಾಗವಹಿಸುವಂತೆ ಸೂಚಿಸಿರುವ ನ್ಯಾಯಾಲಯ ಅಮೆರಿಕ ಮೂಲದ ಸಂಸ್ಥೆಯನ್ನು ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೋರಿದೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.

SCROLL FOR NEXT