ದೇಶ

ಕಾಕ್ರಪರ್ ಪರಮಾಣು ವಿದ್ಯುತ್ ಸ್ಥಾವರ-3 ರ ಯಶಸ್ವಿ ನಿರ್ಮಾಣ: ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ

Sumana Upadhyaya

ನವದೆಹಲಿ: ಕಾಕ್ರಪರ್ ಪರಮಾಣು ವಿದ್ಯುತ್ ಸ್ಥಾವರ -3ರ ಯಶಸ್ವಿ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸ್ವದೇಶಿ ವಿನ್ಯಾಸದ 700 ಮೆಗಾ ವಾಟ್ ಕೆಎಪಿಪಿ-3 ರಿಯಾಕ್ಟರ್ ಪರಮಾಣು ವಿದ್ಯುತ್ ಸ್ಥಾವರ ಮೇಕ್ ಇನ್ ಇಂಡಿಯಾ ಅಥವಾ ಆತ್ಮನಿರ್ಭರಕ್ಕೆ ಉತ್ತಮ ಉದಾಹರಣೆಯಾಗಿದ್ದು ಇದು ಮುಂದಿನ ದಿನಗಳಲ್ಲಿ ಅನೇಕ ಸಾಧನೆಗಳಿಗೆ ದಾರಿದೀಪವಾಗಲಿದೆ. ನಮ್ಮ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.

ಭಾರತೀಯ ಪರಮಾಣು ವಿದ್ಯುತ್ ನಿಗಮ(ಎನ್ ಪಿಸಿಐಎಲ್) ನಿರ್ಮಿಸಿ ಅಭಿವೃದ್ಧಿಪಡಿಸಿರುವ ಕಾಕ್ರಪರ್ ಪರಮಾಣು ವಿದ್ಯುತ್ ಕೇಂದ್ರ ಗುಜರಾತ್ ನಲ್ಲಿರುವ ಪರಮಾಣು ವಿದ್ಯುತ್ ಘಟಕವಾಗಿದೆ. ಈ ಸ್ವಯಂಚಾಲಿತ ಪರಮಾಣು ವಿದ್ಯುತ್ ಘಟಕ-3 700 ಮೆಗಾ ವಾಟ್ ಸಾಮರ್ಥ್ಯದ ನೀರಿನ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು 2010ರಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು.

SCROLL FOR NEXT