ದೇಶ

ಕೊರೋನಾದಿಂದ ಮಾಧ್ಯಮ ಉದ್ಯಮದ ಮೇಲೆ ಆರ್ಥಿಕ ಒತ್ತಡ: ವೆಂಕಯ್ಯ ನಾಯ್ಡು ಕಳವಳ

Vishwanath S

ನವದೆಹಲಿ: ಮಾಧ್ಯಮ ಉದ್ಯಮದಲ್ಲಿ ಕೋವಿಡ್ ನಿಂದ ಎದುರಾಗಿರುವ ಆರ್ಥಿಕ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಸಂಕಷ್ಟದ ಈ ಸಮಯದಲ್ಲಿ ಎಲ್ಲರೂ ಮಾಧ್ಯಮ ಕ್ಷೇತ್ರದಲ್ಲಿನ  ನೌಕರರನ್ನು ಸಹಾನುಭೂತಿಯಿಂದ ನೋಡಿ, ಅವರೊಂದಿಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

ಮಾಧ್ಯಮ ಕ್ಷೇತ್ರದ ದಿಗ್ಗಜ ದಿವಂಗತ ಎಂ ಪಿ ವೀರೇಂದ್ರ ಕುಮಾರ್ ಅವರಿಗೆ ಗೌರವ ಸಲ್ಲಿಸಲು ನಡೆದ ವರ್ಚ್ಯುಯಲ್‍ ರೂಪದಲ್ಲಿ ನಡೆದ ಸ್ಮರಣಾರ್ಥ ಸಭೆಯಲ್ಲಿ ವೆಂಕಯ್ಯ ನಾಯ್ಡು ಮಾತನಾಡಿದರು.

ಮಾತೃಭೂಮಿ ಪ್ರಕಾಶನ ಸಂಸ್ಥೆಯ ನೌಕರರ ಹಕ್ಕುಗಳು ಮತ್ತು ಕಲ್ಯಾಣವನ್ನು ರಕ್ಷಿಸಿದ್ದಕ್ಕಾಗಿ ಮತ್ತು ಮುದ್ರಣ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ತಮ್ಮದೇ ಸಂಸ್ಥೆಯಿಂದ ಅನೇಕ ನಿಯತಕಾಲಿಕೆಗಳನ್ನು ಪ್ರಕಟಿಸಿದ್ದಕ್ಕಾಗಿ ವೀರೇಂದ್ರಕುಮಾರ್‍ ಅವರನ್ನು ಪ್ರಶಂಸಿಸಿದರು.

ಜನತೆಯ ಹಿತದೃಷ್ಟಿಯಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ನಿಂತ ಮುಂಚೂಣಿ ವ್ಯಕ್ತಿಗಳಲ್ಲಿ ವೀರೇಂದ್ರಕುಮಾರ್ ಒಬ್ಬರಾಗಿದ್ದರು ಎಂದು  ಸ್ಮರಿಸಿದ ವೆಂಕಯ್ಯನಾಯ್ಡು, ಮಾತೃಭೂಮಿ ಮುದ್ರಣ ಮತ್ತು ಪ್ರಕಾಶನ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

SCROLL FOR NEXT