ದೇಶ

ಚೆಕ್ ಇನ್ ಮಾಸ್ಟರ್': ಸಂಪರ್ಕ ರಹಿತ ರೈಲು ಟಿಕೆಟ್ ಪರಿಶೀಲನೆಯ ವಿಶೇಷ ಆ್ಯಪ್ ಗೆ ಚಾಲನೆ

Nagaraja AB

ಮುಂಬೈ: ಕೋವಿಡ್-19 ಸೋಂಕು ಹರಡುವಿಕೆ ಪರಿಶೀಲನೆಗಾಗಿ ಛತ್ರಪತಿ ಶಿವಾಜಿ ಮಹಾರಾಜ ನಿಲ್ದಾಣದಲ್ಲಿ 'ಚೆಕ್ ಇನ್ ಮಾಸ್ಟರ್' ಎನ್ನುವ ಸಂಪರ್ಕ ರಹಿತ ಟಿಕೆಟ್ ಪರಿಶೀಲನೆಯ ವಿಶೇಷ ಆ್ಯಪ್ ಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರಿಯ ರೈಲ್ವೆ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

ಛತ್ರಪತಿ ಶಿವಾಜಿ ಮಹಾರಾಜ ನಿಲ್ದಾಣದಲ್ಲಿ ಟಿಕೆಟ್ ಪರಿಶೀಲನೆ ಅಧಿಕಾರಿಗಳು ಈ ಆ್ಯಪ್ ಬಳಸಲಿದ್ದು, ಯಾವುದೇ ಭಯವಿಲ್ಲದೆ
ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅವರಿಗೆ ನೆರವು ನೀಡಲಿದೆ. 

ಒಸಿಆರ್ ಮತ್ತು ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ನಿಂದ ಪಿಆರ್ ಆಸ್ ಮತ್ತು ಯುಟಿಎಸ್ ಟಿಕೆಟ್ ಗಳನ್ನು ಸುರಕ್ಷಿತ ಅಂತರದಿಂದ
ಪರಿಶೀಲಿಸಬಹುದಾಗಿದೆ. ಪ್ರಯಾಣಿಕರ ತಪಾಸಣೆಗೆಗಾಗಿ ಥರ್ಮಲ್ ಗನ್ ಗಳನ್ನು ಕೂಡಾ ಒದಗಿಸಲಾಗಿದೆ.

ನಿಲ್ದಾಣದ ಆಗಮನ ಮತ್ತು ನಿರ್ಗಮನದ ಪ್ರವೇಶ ದ್ವಾರದಲ್ಲಿ ಸ್ವಯಂಚಾಲಿತ ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್ ಪರಿಶೀಲನೆ
ಯಂತ್ರವನ್ನು ಅಳಡಿಸಲಾಗುತ್ತಿದೆ. ಇದು ಸದ್ಯದಲ್ಲಿಯೇ ಕಾರ್ಯನಿರ್ವಹಿಸಲಿದೆ. 

ಚೆಕ್ ಇನ್ ಮಾಸ್ಟರ್ ಆ್ಯಪ್ ನಿಂದ ಟಿಕೆಟ್ ಪರಿಶೀಲನೆ ಸಿಬ್ಬಂದಿಗಳ ಹಾಜರಾತಿ ಹಾಗೂ ಸರಿಯಾದ ವೇಳೆಗೆ ಬರುತ್ತಿದ್ದಾರೆಯೇ ಎಂಬುದರ ಮೇಲೂ ನಿಗಾ ಇಡಬಹುದಾಗಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡುವಲ್ಲಿಯೂ ಈ ಆ್ಯಪ್ ತುಂಬಾ ನೆರವಾಗಲಿದೆ.

SCROLL FOR NEXT