ದೇಶ

ಉತ್ತರ ಪ್ರದೇಶ ಗೌರ್ನರ್ ಆನಂದಿ ಬೆನ್ ಪಟೇಲ್ ಗೆ ಮಧ್ಯಪ್ರದೇಶದ ಹೆಚ್ಚುವರಿ ಹೊಣೆಗಾರಿಕೆ

Srinivas Rao BV

ನವದೆಹಲಿ: ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರಿಗೆ ಮಧ್ಯಪ್ರದೇಶದ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. 

ಮಧ್ಯಪ್ರದೇಶದ ರಾಜ್ಯಪಾಲರಾದ ಲಾಲ್ ಜೀ ಟಂಡನ್ ಅವರು ಜು.21 ರಂದು ನಿಧನರಾದ ಕಾರಣ ಮಧ್ಯಪ್ರದೇಶದ ರಾಜ್ಯಪಾಲರ ಹುದ್ದೆ ತೆರವುಗೊಂಡಿತ್ತು.

ಈಗ ರಾಷ್ಟ್ರಪತಿಗಳ ಕಚೇರಿ ಉತ್ತರ ಪ್ರದೇಶದ ರಾಜ್ಯಪಾಲರಾಗಿರುವ ಆನಂದಿ ಬೆನ್ ಪಟೇಲ್ ಅವರಿಗೆ ಮಧ್ಯಪ್ರದೇಶದ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ನೀಡಿದ್ದು, ಪೂರ್ಣಾವಧಿ ರಾಜ್ಯಪಾಲರ ನೇಮಕವಾಗುವವರೆಗೂ ಮಧ್ಯಪ್ರದೇಶದ ರಾಜ್ಯಪಾಲರಾಗಿ ಕಾರ್ಯನಿರ್ವಹಣೆ ಮಾಡುವಂತೆ ಸೂಚನೆ ನೀಡಿದೆ.

SCROLL FOR NEXT