ದೇಶ

ಮಹಾರಾಷ್ಟ್ರ: ಒಟ್ಟು 8200 ಪೊಲೀಸರಿಗೆ ಕೊರೋನಾ, 93 ಸಾವು

Nagaraja AB

ಮುಂಬೈ: ಮಹಾರಾಷ್ಟ್ರದಲ್ಲಿ ಈವರೆಗೂ 8,200 ಪೊಲೀಸರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು, ಏಳು ಅಧಿಕಾರಿಗಳು
ಸೇರಿದಂತೆ 93 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಅಧಿಕೃತ ಮಾಹಿತಿ ಪ್ರಕಾರ, ನಿಷೇಧಾಜ್ಞೆ  ಜಾರಿಯಾಗುತ್ತಿರುವಂತೆ ಈವರೆಗೂ ಸುಮಾರು 8,200 ಪೊಲೀಸರಿಗೆ
ಕೊರೋನಾ ಸೋಂಕು ತಗುಲಿದೆ. ಈ ಪೈಕಿ 6,314 ಜನರು ಗುಣಮುಖರಾಗಿದ್ದಾರೆ.

ಪ್ರಸ್ತುತ 214 ಅಧಿಕಾರಿಗಳು ಸೇರಿದಂತೆ ಒಟ್ಟಾರೇ 1, 1611 ಸಿಬ್ಬಂದಿಗೆ ಸೋಂಕು ತಗುಲಿದ್ದು,ವಿವಿಧ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿಯೇ 52 ಪೊಲೀಸರು ಮೃತಪಟ್ಟಿದ್ದು, ಒಟ್ಟಾರೇ 93 ಸಾವಿನ ವರದಿಯಾಗಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಕೊರೋನಾವೈರಸ್ ಲಾಕ್ ಡೌನ್ ಜಾರಿಯಾದ ಮಾರ್ಚ್ 22ರಿಂದಲೂ ಈವರೆಗೂ ಕನಿಷ್ಠ 2,07,543 ಅಪರಾಧ ಪ್ರಕರಣಗಳು ದಾಖಲಾಗಿದ್ದು, ಲಾಕ್ ಡೌನ್ ನಿಯಮ ಉಲ್ಲಂಘನೆಯಲ್ಲಿ 37, 671 ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ.ಇದಲ್ಲದೆ ಲಾಕ್ ಡೌನ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಈವರೆಗೂ 16.87 ಕೋಟಿ ಮೊತ್ತದ ದಂಡವನ್ನು ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT