ದೇಶ

ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜನತೆಯ ಒಗ್ಗಟ್ಟಿನಿಂದ ಕೋವಿಡ್-19 ವಿರುದ್ಧ ಜಯ; ಹೋರಾಟ ಇನ್ನೂ ಮುಗಿದಿಲ್ಲ: ಕೇಜ್ರಿವಾಲ್

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜನತೆ, ಕೇಂದ್ರ ಹಾಗೂ ರಾಜ್ಯಸರ್ಕಾರದ ಒಗ್ಗಟ್ಟಿನಿಂದ ಕೋವಿಡ್- 19 ವಿರುದ್ಧ
ಗೆಲುವು ಸಾಧಿಸಲಾಗಿದೆ. ಆದರೆ, ಹೋರಾಟ ಇನ್ನೂ ನಿಂತಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಬುರಾರಿಯಲ್ಲಿನ 450 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದ ಅವರು,ರಾಷ್ಟ್ರ ರಾಜಧಾನಿಯಲ್ಲಿ ಕಳೆದ ತಿಂಗಳಲ್ಲಿ ಕೊರೋನಾವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದರು.

ದೆಹಲಿಯ ಎರಡು ಕೋಟಿ ಜನರು, ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಗ್ಗಟ್ಟಿನಿಂದ ಕೊರೋನಾವೈರಸ್ ವಿರುದ್ಧ ಜಯ
ಸಾಧಿಸಿದ್ದಾರೆ. ಆದರೆ, ಹೋರಾಟ ಇನ್ನೂ ಮುಗಿಯಿತು ಎಂದು ಹೇಳುವುದು ಸರಿಯಲ್ಲ ಎಂದರು.

ಕಳೆದ ಒಂದು ತಿಂಗಳಲ್ಲಿ ದೆಹಲಿಯಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ, ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿದೆ.
ಚೇತರಿಕೆಯ ಪ್ರಮಾಣದಲ್ಲಿ ಪ್ರಗತಿಯಾಗಿದೆ. ನೂತನ ಆಸ್ಪತ್ರೆಯ ಉದ್ಘಾಟನೆಯೊಂದಿಗೆ ನಗರದಲ್ಲಿ ಕೊರೋನಾವೈರಸ್ ರೋಗಿಗಳಿಗೆ ಆಸನದ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಇತ್ತೀಚಿಗೆ ಕೋವಿಡ್-19 ನಿಂದ ಚೇತರಿಸಿಕೊಂಡ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಬುರಾರಿಯಲ್ಲಿನ ಆಸ್ಪತ್ರೆಯನ್ನು ಉದ್ಘಾಟಿಸಿದರು.ಇಂದಿನ ಅಂಕಿಅಂಶಗಳ ಪ್ರಕಾರ ದೆಹಲಿಯಲ್ಲಿ 1, 28, 389 ಸೋಂಕಿತರಿದ್ದು, 3777 ಮಂದಿ ಸಾವನ್ನಪ್ಪಿದ್ದಾರೆ. 13,681 ಸಕ್ರಿಯ ಪ್ರಕರಣಗಳಿವೆ.

SCROLL FOR NEXT